ಉಡುಪಿಯಲ್ಲಿ ಈದ್ ಸೌಹಾರ್ದ ಕೂಟ


ಉಡುಪಿ, ಎ.30: ಲಯನ್ಸ್ ಇಂಟರ್ನ್ಯಾಶನಲ್ 317ಸಿ, ಲಯನ್ಸ್ ಕ್ಲಬ್ ಉಡುಪಿ ಅಮೃತ್, ಲಯನ್ಸ್ ಮತ್ತು ಲಿಯೋ ಕ್ಲಬ್ ಉಡುಪಿ -ಇಂದ್ರಾಳಿ ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಈದ್ ಸೌಹಾರ್ದ ಕೂಟವನ್ನು ಶನಿವಾರ ಅಂಬಾಗಿಲಿನ ಅಮೃತ್ ಗಾರ್ಡನ್ನಲ್ಲಿ ಆಯೋಜಿಸ ಲಾಗಿತ್ತು.

ವೌಲಾನ ಅಬ್ದುಲ್ ಅಝೀಝ್ ದಾರಿಮಿ ಈದ್ ಸಂದೇಶ ನೀಡಿ, ಬಿ ಅಂದರೆ ಬರ್ತ್, ಡಿ ಅಂದರೆ ಡೆತ್ ಇವೆರಡರ ನಡುವೆ ಇರುವ ಸಿ ಎಂಬ ಚಾಯ್ಸ್ನಿಂದ ನಾವು ಈ ಭೂಲೋಕಕ್ಕೆ ಬಂದಿದ್ದೇವೆ. ಇಲ್ಲಿ ನಾವು ಮಾಡುವ ಪ್ರತಿಯೊಂದು ಒಳಿತು ಮತ್ತು ಕಡೆಕು ನಮ್ಮ ಜೊತೆಯಲ್ಲಿಯೇ ಬರುತ್ತದೆ. ನಮ್ಮ ಜೀವನ ಒಳಿತಿನಿಂದ ಕೂಡಿದ್ದರೆ ಅದುವೆ ನಿಜವಾದ ಹಬ್ಬ ಎಂದರು. ನಾವೆಲ್ಲರೂ ಪರಸ್ಪರ ಸಹೋದರರು ಎಂಬುದಾಗಿ ಕುರ್ಆನ್, ಬೈಬಲ್, ಉಪನಿಷತ್ಗಳು ಸಾರಿದ್ದು, ಶಾಂತಿ, ಸೌಹಾರ್ದತೆಯಿಂದ ಬಾಳಬೇಕಾಗಿರು ವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಪ್ರತಿಯೊಬ್ಬರ ಹಕ್ಕು ಎಂದು ಅವರು ಹೇಳಿದರು.


ಲಯನ್ಸ್ ಜಿಲ್ಲಾ ಗವರ್ನರ್ ಎಂ.ಕೆ.ಭಟ್ ಈದ್ ಶುಭಾಶಯ ನೀಡಿದರು. ದರು. ಲಯನ್ಸ್ ಮಾಜಿ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ಲಯನ್ಸ್ ನಿಯೋಜಿತ ಜಿಲ್ಲಾ ಗವರ್ನರ್ ನೇರಿ ಕರ್ನೆಲಿಯೋ, ಲಯನ್ಸ್ ಪ್ರಥಮ ವೈಸ್ ಗವರ್ನರ್ ಮುಹಮ್ಮದ್ ಹನೀಫ್ ಮಾತನಾಡಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಸಮಾರೋಪ ಭಾಷಣ ಮಾಡಿದರು. ಉದ್ಯಮಿ ಪುರುಷೋತ್ತಮ ಶೆಟ್ಟಿ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಮೋಹನ್ ಶೆಟ್ಟಿ ಸ್ವಾಗತಿಸಿದರು. ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಎಸ್.ಎಂ.ಇರ್ಶಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷ ಜಯಪ್ರಕಾಶ್ ಭಂಡಾರಿ ವಂದಿಸಿದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು

Latest Indian news

Popular Stories