ಉಡುಪಿ, ಡಿ.31: ಖತರ್ ನಲ್ಲಿ ಉದ್ಯೋಗಿಯಾಗಿದ್ದ
ಕೋಟತಟ್ಟು ಪಡುಕರೆ ನಿವಾಸಿ ಮುಹಮ್ಮದ್ (45) ಎಂಬವರು ಕುಸಿದು ಬಿದ್ದು ಮೃತಪಟ್ಟ ಕುರಿತು ವರದಿಯಾಗಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆ ನಿವಾಸಿಯಾಗಿದ್ದ ಮುಹಮ್ಮದ್ ಖತರ್ ನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಜ.2ರಂದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.ನಾಲ್ಕು ದಿನಗಳ ಹಿಂದೆ ಕೆಲಸ ನಿರ್ವಹಿಸುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು
ನಿಷ್ಕ್ರಿಯೆಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೋಟತಟ್ಟು ಪಡುಕರೆ ಹಿದಾಯತುಲ್ ಇಸ್ಲಾಂ ಮದ್ರಸದ
ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಕೆಸಿಎಫ್ ಖತರ್ ರಾಷ್ಟ್ರೀಯ ಸಮಿತಿಯ ಅಝೀಝಿಯಾ ಝೇನ್ ಸನಯ್ಯಾ ಯುನಿಟ್ ಅಧ್ಯಕ್ಷರಾಗಿದ್ದರು.
ಮೃತರು ತಾಯಿ, ಪತ್ನಿ, ನಾಲ್ವರು ಸಹೋದರರು, ಇಬ್ಬರು
ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು
ಅಗಲಿದ್ದಾರೆ.