ಉಡುಪಿ : ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಸಿಓಡಿ ತನಿಖೆಗೆ: ಗೃಹ ಸಚಿವರ ಆದೇಶ

ಉಡುಪಿ : ಬ್ರಹ್ಮಾವರ ತಾಲೂಕಿನ ಕೋಟತಟ್ಟು ಕೊರಗ ಕಾಲನಿಯ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಘಟನೆಯನ್ನು ಇದೀಗ ಸಿಒಡಿ ತನಿಖೆಗೆ ಆದೇಶ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕೋಟದ ಕೊರಗರ ಕಾಲನಿಗೆ ಗೃಹ ಸಚಿವರು ಇಂದು ಭೇಟಿ ನೀಡಿದ ಬಳಿಕ ಅವರು ಸಿಓಡಿ ತನಿಖೆಗೆ ಆದೇಶಿಸಿದ್ದಾರೆ. ಅದರೊಂದಿಗೆ ಇದೇ ವೇಳೆ ಲಾಠಿಚಾರ್ಜ್ ನಿಂದ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಅದರಲ್ಲಿ 6 ಕುಟುಂಬಗಳಿಗೆ 50 ಸಾವಿರ ರೂ. ಚೆಕ್ ವಿತರಿಸಿದರು.

ಅವರ ವಿರುದ್ಧ ದಾಖಲಾದ ಕೇಸ್ ಅನ್ನು ಸರಕಾರದ ಮುಖಾಂತರ ವಾಪಸ್ ಪಡೆಯಲು ಕ್ರಮ ಜರಗಿಸುವುದಾಗಿ ಸಚಿವರು ಭರವಸೆ ನೀಡಿದರು.

Latest Indian news

Popular Stories

error: Content is protected !!