ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಮತ್ತು ಮಸೀದಿ ಸಂದರ್ಶನ ಸ್ವಾಗತ ಸಮಿತಿಯ ಸಹಯೋಗದೊಂದಿಗೆ ಉಡುಪಿಯ ಜಾಮೀಯಾ ಮಸೀದಿಯಲ್ಲಿ “ಸರ್ವ ಧರ್ಮಿಯರಿಗೆ ಮಸೀದಿ ಸಂದರ್ಶನ ಕಾರ್ಯಕ್ರಮ” ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಮನೋ ವೈದ್ಯ ಪಿ.ವಿ ಭಂಡಾರಿ, “ಉಡುಪಿ ಎಂದ ತಕ್ಷಣ ನೆನಪಾಗುವುದು ಹಾಜಿ ಅಬ್ದುಲ್ಲಾ ಸಾಹೇಬರು. ಸೌಹರ್ದತೆಗೆ ಅವರ ಕೂಡ ಅಪಾರವಾಗಿದೆ. ಅವರು ಕೇವಲ ಕಾರ್ಪೊರೇಷನ್’ನ ಸಂಸ್ಥಾಪಕರು ಮಾತ್ರವಲ್ಲ. ಈ ನೆಲದ ಸೌಹರ್ದಕ್ಕಾಗಿ ದುಡಿದವರು. ಶ್ರೀ ಕೃಷ್ಣ ಮಠಕ್ಕೆ ದೀಪದ ಎಣ್ಣೆ ಕಡಿಮೆಯಾದಾಗ ಅವರು ಕೋಡುತ್ತಿದ್ದ ಕುರಿತು ಉಲ್ಲೇಖವಿದೆ ಎಂದರು. ಇಂತಹ ಕಾರ್ಯಕ್ರಮಗಳು ವ್ಯಾಪಕವಾಗಬೇಕೆಂದರು.
ವಿಠಲ ದಾಸ್ ಬನ್ನಂಜೆ,ನಿವೃತ್ತ ಪ್ರಾಧ್ಯಾಪಕ ಪ್ರೊ.ಫಣಿರಾಜ್ ಮಾತನಾಡಿದರು. ಇದ್ರಿಸ್ ಹೂಡೆ ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಯು.ಎಸ್ ವಾಹೀದ್, ವೆರೋನಿಕಾ ಕರ್ನೆಲಿಯೋ,ಮಸೀದಿಯ ಅಧ್ಯಕ್ಷರಾದ ಅರ್ಶದ್, ರಮೇಶ್ ಕಾಂಚನ್, ಇಕ್ಬಾಲ್ ಮನ್ನಾ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಅಝೀಝ್ ಸೇರಿದಂತೆ ಮುತಾಂದವರು ಉಪಸ್ಥಿತರಿದ್ದರು.