ಉಡುಪಿ:ಐದು ವಿಧಾನ ಸಭಾ ಕ್ಷೇತ್ರಗಳಿಗೆ ಎನ್.ಎಸ್.ಯು.ಐ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕ ಮಾಡಿ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಪ್ರಚಾರ ಸಮಿತಿ ಅಧ್ಯಕ್ಷರಾದ ಸಯ್ಯದ್ ಫುರ್ಕಾನ್ ಯಾಸೀನ್ ಸುತ್ತೋಲೆ ಹೊರಡಿಸಿದ್ದಾರೆ.
ಬೈಂದೂರು ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶಬರೀಶ್ ಶೆಟ್ಟಿ, ಕುಂದಾಪುರದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗೌರವ್ ಹಲ್ಸ್ನಾಡ್, ಉಡುಪಿ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶರತ್ ಕುಂದರ್,ಕಾರ್ಕಳ ಕ್ಷೇತ್ರಕ್ಕೆ ಪರೀಕ್ಷಿತ್ ಮತ್ತು ಕಾಪು ಕ್ಷೇತ್ರಕ್ಕೆ ಮುಹಮ್ಮದ್ ರೆಹಾನ್ ಅವರನ್ನು ಆಯ್ಕೆ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.