ಉಡುಪಿ: ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಕ್ಯುಆರ್‌ ಕೋಡ್‌ನ‌ಲ್ಲಿ ಲಭ್ಯ

ಉಡುಪಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇನ್ನು ಮುಂದೆ ಕ್ಯು.ಆರ್‌. ಕೋಡ್‌ ಮೂಲಕ ಸ್ಕ್ಯಾನ್‌ ಮಾಡಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕರಾವಳಿ ವಿಕಿಮೀಡಿಯಾ ಮತ್ತು ವಿಕಿ ಇ-ಲರ್ನಿಂಗ್‌ ಕೋರ್ಸ್‌, ಡಾ| ಜಿ.ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ರವಿವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಇಲಾಖೆಯಿಂದ ಅಳವಡಿಸಿರುವ ಕ್ಯು.ಆರ್‌. ಕೋಡ್‌ ಬೋರ್ಡ್‌ ಅನಾವರಣಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯ ಆಗಮಿಸುವ ಪ್ರವಾಸಿಗರು ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಿದರೂ ಸಹ ಅಲ್ಲಿನ ವೈಶಿಷ್ಟ್ಯತೆಯ ಸಂಪೂರ್ಣ ವಿವರಗಳು ಅವರಿಗೆ ದೊರೆಯದ ಕಾರಣ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಜಿಲ್ಲೆಯ 30 ಪ್ರೇಕ್ಷಣೀಯ ಸ್ಥಳಗಳಿಗೆ ಕ್ಯು.ಆರ್‌. ಕೋಡ್‌ ಮೂಲಕ ಅಲ್ಲಿನ ಪ್ರದೇಶದ ಇತಿಹಾಸ ಸೇರಿದಂತೆ ಸಂಪೂರ್ಣ ವಿವರಗಳನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಸಹಕಾರಿಯಾಗಲಿದೆ ಎಂದರು.

Latest Indian news

Popular Stories