ಉಡುಪಿ | ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ – ವೀರಪ್ಪ ಮೊಯಿಲಿ ಸ್ಪಷ್ಟನೆ

ಉಡುಪಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಕುರಿತು ಉಲ್ಲೇಖಿಸಿರುವ ಕುರಿತು ಬಜರಂಗದಳದ ಕಾರ್ಯಕರ್ತರು ಕೆಲವು ಕಡೆ ಪ್ರತಿಭಟನೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಇದೀಗ ಉಡುಪಿಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ವೀರಪ್ಪ ಮೊಯಿಲಿ ಭಜರಂಗದಳವನ್ನು ನಿಷೇಧಿಸುವ ಯಾವುದೇ
ಪ್ರಸ್ತಾವನೆ ಕಾಂಗ್ರೆಸ್ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಹಿಂದೆ ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದಾಗಲೂ ಪ್ರಸ್ತಾವನೆ ಇರಲಿಲ್ಲ. ರಾಜ್ಯ ಸರ್ಕಾರ ಅಂತಹ ಸಂಘಟನೆಗಳನ್ನು ನಿಷೇಧಿಸುವ ಹಕ್ಕು‌ ಹೊಂದಿರಲಿಲ್ಲ ಎಂದರು.

ಇಂದು ಉಡುಪಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯಿಲಿ , ವಲ್ಲಭಬಾಯಿ ಪಟೇಲ್ ಅವರನ್ನು ಈಗ ಬಿಜೆಪಿ ಆರಾಧಿಸುತ್ತದೆ. ಆದರೆ ಪಟೇಲ್ ಅವರು ಆರೆಸ್ಸೆಸ್ ನ್ನು ಬ್ಯಾನ್ ಮಾಡಿದ್ದರು. ಜವಾಹರಲಾಲ್ ನೆಹರೂ ಬ್ಯಾನ್‌ನ್ನು ವಾಪಾಸು ಪಡೆದರು.

ಸುಪ್ರೀಂ ಕೋರ್ಟ್ ದ್ವೇಷ ರಾಜಕೀಯ ಕುರಿತು ಸ್ಪಷ್ಟ ತೀರ್ಪು ನೀಡಿದೆ. ಅದರ ಭಾಗವಾಗಿ ಈ ಪ್ರಸ್ತಾಪ ಮಾಡಿದ್ದೇವೆಯೇ ಹೊರತು ಭಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಇದನ್ನು ನಮ್ಮ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಇವತ್ತು ಸ್ಪಷ್ಟಪಡಿಸುತ್ತಾರೆ ಎಂದು ಮಾಜಿ ಸಿಎಂ , ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಹೇಳಿದರು.

Latest Indian news

Popular Stories