ಉಡುಪಿ: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಲಾಡ್ಜ್ ಒಂದಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶೇಖರ್, ಕಾಪು ತೆಂಕ ಎರ್ಮಾಳ್‌ನ ನಿವಾಸಿ ಜಯಂತ್ ಸಾಲಿಯಾನ್ (46), ಹೆಬ್ರಿ ಸೀತಾನದಿ ನಿವಾಸಿ ದಿನೇಶ್ ಎಸ್. (42) ಬಂಧಿತ ಆರೋಪಿಗಳು.
ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಜ.4ರಂದು ಮಧ್ಯಾಹ್ನ ಪೊಲೀಸ್ ಉಪಾಧೀಕ್ಷಕರಿಂದ ಶೋಧನಾ ವಾರಂಟ್ ಪಡೆದು ದಾಳಿ ನಡೆಸಿದ್ದು, ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 5,600 ರೂ. ನಗದು, 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳು ನೊಂದ ಮಹಿಳೆಯನ್ನು ಲಾಡ್ಜ್ ನ ರೂಮಿನಲ್ಲಿರಿಸಿ ಗಿರಾಕಿಗಳಿಗೆ ಹಣಕ್ಕೆ ಒದಗಿಸಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಿ ಅದರಿಂದ ಗಳಿಸಿದ ಹಣದಿಂದ ಜೀವನ ನಡೆಸುತ್ತಿದ್ದರು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.