ಉಡುಪಿ: ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರ ಚಿನ್ನದ ಸರ ಕಳವು

ಕಾರ್ಕಳ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರ ಚಿನ್ನದ ಕರಿಮಣಿಸರವನ್ನು ಕಳವುಗೈದ ಘಟನೆ ಜ.17ರಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ನಿವಾಸಿ ಉಷಾ ಎಂಬವರು ಚಿನ್ನದ ಕರಿಮಣಿಸರ ಕಳೆದುಕೊಂಡ ಮಹಿಳೆ. ಇವರು ಜ.15ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು‌.

ಜ.16ರಂದು ಹೆರಿಗೆ ಆಗಿದ್ದು, ಬಳಿಕ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಜ.17ರಂದು ಮಧ್ಯಾಹ್ನ 2.30ರ ಸುಮಾರಿಗೆ ಉಷಾ ಅವರು, ವಾರ್ಡ್ ನೊಳಗಿರುವ ಬಾತ್ ರೂಮ್ ಗೆ ಸ್ನಾನಕ್ಕೆಂದು ಹೋಗಿದ್ದರು. ಸ್ನಾನ ಮಾಡುವ ಸಂದರ್ಭದಲ್ಲಿ ಚಿನ್ನದ ಕರಿಮಣಿ ಸರವನ್ನು ಬಾತ್ ರೂಮ್ ನಲ್ಲಿ ತೆಗೆದು ಇಟ್ಟಿದ್ದರು. ಆದರೆ ಬಳಿಕ ಉಷಾ ಅವರಿಗೆ ತಲೆ ಸುತ್ತು ಬಂದ ಕಾರಣ ತಾಯಿ ಮೋಹಿನಿ ಅವರು, ಅವರನ್ನು ಕರೆದುಕೊಂಡು ಬಂದು ಬೆಡ್ ನಲ್ಲಿ ಮಲಗಿಸಿದ್ದಾರೆ. ನಂತರ ಬಾತ್ ರೂಮ್ ಗೆ ಹೋಗಿ ನೋಡಿದಾಗ ತೆಗೆದಿಟ್ಟ ಜಾಗದಲ್ಲಿ ಕರಿಮಣಿಸರ ಇಲ್ಲದೆ ಇದ್ದು, ಯಾರೋ ಕಳ್ಳರು ಕರಿಮಣಿಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಕರಿಮಣಿಸರದ  ಮೌಲ್ಯ 1,30 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಹ್ನ 2.30ಕ್ಕೆ ನಡೆದಿದೆ.

Latest Indian news

Popular Stories