ಉಡುಪಿ :ಹಿಂದೂಗಳು ಬಹುಸಂಖ್ಯಾತರಾದರೆ ಮಾತ್ರ ಭಾರತ ಪ್ರಜಾಪ್ರಭುತ್ವವಾಗಿ ಉಳಿಯುತ್ತದೆ: ತೇಜಸ್ವಿ ಸೂರ್ಯ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಇವತ್ತು ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.ಮತಾಂತರದ ಕುರಿತು , ,ಮುಸ್ಲಿಂ ,ಕ್ರೈಸ್ತ ಧರ್ಮೀಯರ ಕುರಿತು ಮತ್ತು ಭಾರತ ಏಕೆ ಹಿಂದೂ ರಾಷ್ಟ್ರವಾಗಬೇಕು ಇತ್ಯಾದಿ ವಿಷಯಗಳ ಕುರಿತು ತಮ್ಮ ವಾದ ಮಂಡಿಸಿದ್ದಾರೆ.

ಕಾಂಗ್ರೆಸ್ ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿರುವುದು ಏಕೆಂದರೆ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದೂ ಧರ್ಮದ ಪುನರುತ್ಥಾನ ವಾಗುತ್ತಿದೆ ಎಂಬ ಕಾರಣಕ್ಕೆ. ಸ್ವಾಮಿ ವಿವೇಕಾನಂದರ ಒಂದು ಮಾತು ನೆನಪಿಸಿಕೊಳ್ಳಬೇಕು. ಓರ್ವ ಹಿಂದೂ ಧರ್ಮ ತೊರೆದರೆ ಕೇವಲ ಒಬ್ಬ ಹಿಂದುವಿನ ಸಂಖ್ಯೆ ಕಡಿಮೆಯಾಗುವುದಲ್ಲ,ಬದಲಾಗಿ ಹಿಂದೂ ಧರ್ಮಕ್ಕೆ ಒಬ್ಬ ಹೊಸ ಶತ್ರು ಹುಟ್ಟಿದಂತೆ ಎಂದು ವಿವೇಕಾನಂದರು ಹೇಳಿದ್ದರು.ಮುಂದುವರೆದು ಮಾತನಾಡಿದ ಅವರು , ಈ ದೇಶದಲ್ಲಿರುವ ಕ್ರಿಶ್ಚಿಯನ್ನರು, ಮುಸ್ಲಿಮರು ಎಲ್ಲ ಒಂದು ಕಾಲಕ್ಕೆ ಹಿಂದೂಗಳಾಗಿದ್ದವರೇ ಎಂದು ಹೇಳಿದ್ದಾರೆ.

Latest Indian news

Popular Stories

error: Content is protected !!