ಡೆಹ್ರಾಡೂನ್: ಉತ್ತರಾಖಂಡ್ ನ ಜೋಷಿಮಠದಲ್ಲಿ ದೇವಾಲಯ ಕುಸಿತವಾಗಿದೆ.
ಸಿಂಗ್ ಧರ್ ವಾರ್ಡ್ ನಲ್ಲಿ ದೇವಾಲಯ ಕುಸಿತ ಕಂಡಿದ್ದು ಸ್ಥಳೀಯರ ಪ್ರಕಾರ, ದೇವಾಲಯದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ದೇವಾಲಯದಲ್ಲಿ 15 ದಿನಗಳಿಂದ ಬೃಹತ್ ಪ್ರಮಾಣದ ಬಿರುಕು ಪತ್ತೆಯಾಗಿತ್ತು.
ದೇವಾಲಯ ಕುಸಿತ ಕಂಡಿರುವ ಪರಿಣಾಮ ದೇವಾಲಯದ ಬಳಿಯೇ ಇದ್ದ ಹಲವು ಮನೆಗಳಲ್ಲಿ ಬಿರುಕು ಪತ್ತೆಯಾಗಿದ್ದು, 50 ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಷ್ಣು ಪ್ರಯಾಗ್ ಜಲ್ ವಿದ್ಯುತ್ ಪರಿಯೋಜನಾ ಉದ್ಯೋಗಿಗಳಿಗಾಗಿ ನಿರ್ಮಿಸಲಾಗಿದ್ದ ಕಾಲೋನಿಯಲ್ಲಿ ವಾಸಿಸುತ್ತಿದ್ದ 60 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಯೋಜನೆಯ ನಿರ್ದೇಶಕ ಪಂಕಜ್ ಚೌಹಾಣ್ ಹೇಳಿದ್ದಾರೆ. ಮೂರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಅಕ್ವಿಫರ್ ಸ್ಫೋಟ ಸಂಭವಿಸಿ ಹಲವು ಮನೆಗಳು ಹಾನಿಗೊಳಗಾಗಿವೆ.