ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ 403 ಕ್ಷೇತ್ರಗಳಿಗೂ ಸ್ಪರ್ಧಿಸಲಿದೆ – ಪ್ರಿಯಾಂಕ ಗಾಂಧಿ

ಉತ್ತರ ಪ್ರದೇಶ: ಮುಂದಿನ ವರ್ಷ ದೇಶದ ಅತೀ ದೊಡ್ಡ ವಿಧಾನಸಭಾ ರಾಜ್ಯವಾದ ಉತ್ತರ ಪ್ರದೇಶದ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿದೆ. ಮೈತ್ರಿಯ ಕುರಿತೂ ಮಾತುಕತೆಗಳು ನಡೆಯುತ್ತಿವೆ.

ಈತನ್ಮಧ್ಯೆ ಕಾಂಗ್ರೆಸ್ ಪಕ್ಷ ಮಾತ್ರ 403 ಸ್ಥಾನಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದೆಯೆಂದು ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ. ಪ್ರಿಯಾಂಕ ಗಾಂಧಿ ಪ್ರತಿಯೊಂದು ದುರ್ಘಟನೆಯ ಸಂದರ್ಭದಲ್ಲಿ ಜನರೊಂದಿಗೆ ಶೀಘ್ರವಾಗಿ ಸ್ಪಂದಿಸಿ ಹೆಸರುವಾಸಿಯಾಗಿದ್ದರು.

ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿಯನ್ನು ತಳ್ಳಿಹಾಕಿದ ಅವರು, 2017 ರ ಉನ್ನಾವೋ ಅತ್ಯಾಚಾರ ಪ್ರಕರಣ ಮತ್ತು ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಎಸ್‌ಪಿ) ನಾಯಕರು ಎಲ್ಲಿಯೂ ಕಾಣಿಸಲಿಲ್ಲ. 2020 ದೇಶವನ್ನು ಅಲುಗಾಡಿಸಿತು.ಕಾಂಗ್ರೆಸ್ ಮಾತ್ರ ಜನರಿಗಾಗಿ ಹೋರಾಡುತ್ತಿದೆ ಎಂದು ಹೇಳಿದರು.

ಇಲ್ಲಿ ಅನೂಪ್‌ಶಹರ್‌ನಲ್ಲಿ ನಡೆದ ಪ್ರತಿಜ್ಞಾ ಸಮ್ಮೇಳನ – ಲಕ್ಷ್ಯ 2022 ರಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಕ್ಷಕ್ಕೆ ಉತ್ತರ ಪ್ರದೇಶ ಚುನಾವಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಇದನ್ನು “ಮಾಡು-ಅಥವಾ-ಮಡಿ”ಯಾಗಿ ಸ್ವೀಕರಿಸಿ ಎಂದು ಕರೆ ನೀಡಿದರು.

Latest Indian news

Popular Stories