ಉತ್ತರ ಪ್ರದೇಶದಲ್ಲಿ ವಿಶೇಷ ಸಾಮರ್ಥ್ಯ ಬಾಲಕನನ್ನು ಅಮಾನುಷವಾಗಿ ಥಳಿಸಿದ ಪೊಲೀಸರು

ಉತ್ತರ ಪ್ರದೇಶ: ಬರೇಲಿ ಜಿಲ್ಲೆಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಬಾಲಕನನ್ನು (ಬಲಗೈ ಇಲ್ಲ) ಇಬ್ಬರು ಗಸ್ತು ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂತ್ರಸ್ಥರ ಹೇಳಿಕೆಯನ್ನು ಪತ್ರಕರ್ತ ಪಿಯೂಷ್ ರೈ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.ಸಂತ್ರಸ್ತ ತನ್ನ ಕಷ್ಟವನ್ನು ವಿವರಿಸುವಾಗ ಕಣ್ಣೀರು ಸುರಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

“ಅವರು (ಪೊಲೀಸರು) ನಾನು ಮೀನು ಮಾರಾಟ ಮಾಡುತ್ತೀಯಾ ಎಂದು ಕೇಳಿದಾಗ ನಾನು ಹೌದು ಎಂದು ಉತ್ತರಿಸಿದೆ. ಅವರು ನನ್ನ ಮೇಲೆ ಕಾನೂನುಬಾಹಿರ ಚಟುವಟಿಕೆಯ ಕುರಿತು ಆರೋಪಿಸಿದರು. ಗಳಿಸಿದ ಅರ್ಧದಷ್ಟು ಹಣವನ್ನು ನಾನು ಅವರಿಗೆ ನೀಡಬೇಕು ಎಂದು ಅವರು ಹೇಳಿದರು. ನಾನು ಅವರಿಗೆ ಹಣವನ್ನು ನೀಡಲು ನಿರಾಕರಿಸಿದಾಗ,ನನಗೆ ಎಲ್ಲೆಂದರಲ್ಲಿ ಹೊಡೆದರು. ನಾನೇನು ಮಾಡಲಿ ಸರ್ ಅವರು ನನಗೆ ತುಂಬಾ ಕೆಟ್ಟದಾಗಿ ಹೊಡೆದಿದ್ದಾರೆ,” ಎಂದು ಅಮಾಯಕ ಹುಡುಗ ಕಣ್ಣೀರು ಸುರಿಸಿದ್ದಾನೆ.

Latest Indian news

Popular Stories

error: Content is protected !!