ಉ.ಪ್ರ: ಜೌನ್ಪುರದ ತಿಲಕಧಾರಿ ಕಾಲೇಜಿನಲ್ಲಿ, ಹಿಜಾಬ್ ಧರಿಸಿದ್ದ ವಿದ್ಯಾರ್ಥಿಯನ್ನು ತರಗತಿ ಶಿಕ್ಷಕರು ಹೊರಹಾಕಿರುವ ಘಟನೆ ವರದಿಯಾಗಿದೆ.
ಶಿಕ್ಷಕರು ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿ ಜರೀನಾರಿಗೆ, “ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಏನಾಗುತ್ತಿದೆಯೋ ಅದು ಚೆನ್ನಾಗಿ ನಡೆಯುತ್ತಿದೆ, ಆ ನಿಯಮವನ್ನು ಯುಪಿಯಲ್ಲಿಯೂ ಜಾರಿಗೆ ತರಬೇಕು” ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸಂತ್ರಸ್ಥ ವಿದ್ಯಾರ್ಥಿನಿ ತನ್ನ ಹೇಳಿಕೆಯನ್ನು ನೀಡಿದ್ದು ಇದೀಗ ಟ್ವೀಟರ್ ನಲ್ಲಿ ವರದಿಯಾಗಿದೆ.