ಉತ್ತರ ಪ್ರದೇಶದ ಗುರ್ಗಾಂವ್ನ ಕೆಲವು ಭಾಗಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.ಅಲ್ಲಿ ಖಾಸಗಿ ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ನಿನ್ನೆ ನಿರಂತರ ಮಳೆಯ ನಂತರ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ದೆಹಲಿಯ ಕೆಲವು ಭಾಗಗಳು ಜಲಾವೃತವಾಗಿವೆ.
ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಫಿರೋಜಾಬಾದ್ನಲ್ಲಿ ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದ್ದರಿಂದ ಸಿಡಿಲು, ಗೋಡೆ ಮತ್ತು ಮನೆ ಕುಸಿದ ಘಟನೆಗಳಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.11 ಮಂದಿ ಗಾಯಗೊಂಡಿದ್ದಾರೆ.
ಅಲಿಘರ್ನಲ್ಲಿ ಶಾಲೆಗಳನ್ನು ಮುಚ್ಚುವಂತೆ ಒತ್ತಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.