ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ರೈತರು ವಿರೋಧಿಸಲಿದ್ದಾರೆ – ರೈತ ಸಂಘ ನಿರ್ಧಾರ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಯಾದ ಅರುಣ್ ನರವರ್ ಕುಟುಂಬವನ್ನು ಸೋಮವಾರ ಭೇಟಿಯಾದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಹಾಗೂ 40 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ನರವರ್ ಕುಟುಂಬ ಸದಸ್ಯರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್, ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಲಖೀಂಪುರ್ ಖೇರಿ ಮತ್ತು ಕಾನ್ಫುರದಲ್ಲಿ 40 ರಿಂದ 45 ಲಕ್ಷ ಪರಿಹಾರ ನೀಡಿದರೆ, ಅಗ್ರಾ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಿದೆ. ಅರುಣ್ ನರವರ್ ಕುಟುಂಬ ಸದಸ್ಯರಿಗೂ 40 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.

ಇಲ್ಲಿನ ಪೊಲೀಸ್ ಠಾಣೆಯೊಂದರಿಂದ 25 ಲಕ್ಷ ಕಳುವು ಆರೋಪದಲ್ಲಿ ಬಂಧಿಸಲಾಗಿದ್ದ ಅರುಣ್ ನರವರ್ ಅವರನ್ನು ಅಕ್ಟೋಬರ್ 19 ರಂದು ವಿಚಾರಣೆ ಮಾಡುವಾಗ ಆರೋಗ್ಯ ಕ್ಷೀಣಿಸಿದ ನಂತರ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.

ಕೃಷಿ ಕಾನೂನು ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಟಿಕಾಯತ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ರೈತರಿಗೆ ಮನವಿ ಮಾಡುತ್ತೇನೆ. ಸಂಯುಕ್ತ ಕಿಸಾನ್ ಮೋರ್ಚ್ ಬಿಜೆಪಿಯನ್ನು ವಿರೋಧಿಸಲಿದೆ. ಚುನಾವಣೆಯಲ್ಲಿ ನಾವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಟಿಕಾಯತ್ ಹೇಳಿದರು.

Latest Indian news

Popular Stories

error: Content is protected !!