ಉತ್ತರ ಪ್ರದೇಶ ಚುನಾವಣೆ: ವಾರಣಾಸಿಗೆ ತೆರಳಲಿರುವ ಗೃಹ ಸಚಿವ ಅಮಿತ್ ಶಾ

ಉ.ಪ್ರ: ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳ ತಯಾರಿ ಜೋರಾಗಿಯೇ ನಡೆಯುತ್ತಿದೆ. ಈತನ್ಮಧ್ಯೆ ಬಿಜೆಪಿ ಕೂಡ ತಯಾರಾಗುತ್ತಿದ್ದು ಅಮಿತ್ ಶಾ ವರಣಾಸಿಗೆ ಭೇಟಿ ನೀಡಲಿದ್ದಾರೆ.

ನವೆಂಬರ್ 12 ರಂದು ವರಣಾಸಿಗೆ ತೆರಳಲಿದ್ದು ಅಲ್ಲಿ ಅವರು ಬಿಜೆಪಿಯ ಸುಮಾರು 700 ನಾಯಕರಿಗೆ ಚುನಾವಣೆಯ ಕುರಿತಾಗಿ ಮಾಸ್ಟರ್‌ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉ.ಪ್ರದೇಶದ 98 ಜಿಲ್ಲೆಯ ಪಕ್ಷಾಧ್ಯಕ್ಷರು, 403 ಕ್ಷೇತ್ರಗಳ ಉಸ್ತುವಾರಿಗಳು, ಆರು ಪ್ರಾದೇಶಿಕ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿಯ ಎಲ್ಲ ಪ್ರಮುಖ ನಾಯಕರಿಗೆ ಸಭೆಗೆ ಆಹ್ವಾನ ನೀಡಲಾಗಿದೆ.

ಚುನಾವಣೆಗೆ ಯಾವ ರೀತಿಯಲ್ಲಿ ಪ್ರಚಾರ ನಡೆಸಬೇಕು, ಯಾವ ರೀತಿಯಲ್ಲಿ ಸಜ್ಜಾಗಬೇಕು ಎನ್ನುವ ಕುರಿತಾಗಿ ಸಭೆಯಲ್ಲಿ ಶಾ ಅವರು ಚರ್ಚಿಸಲಿದ್ದಾರೆ ಎನ್ನಲಾಗಿದೆ.

Latest Indian news

Popular Stories

error: Content is protected !!