ಉತ್ತರ ಪ್ರದೇಶ: ಹೊಸ ಮದರಸಾಗಳಿಗೆ ಧನಸಹಾಯ ನಿಲ್ಲಿಸಿದ ಯೋಗಿ ಆದಿತ್ಯನಾಥ್ ಸರ್ಕಾರ

ನವದೆಹಲಿ: ಉತ್ತರ ಪ್ರದೇಶದಲ್ಲಿ ಹೊಸ ಮದರಸಾಗಳನ್ನು ಅನುದಾನ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

ಅಖಿಲೇಶ್ ಯಾದವ್ ಸರ್ಕಾರದ ನೀತಿಗೆ ಅಂತ್ಯ ಹಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಂಪುಟ, ಹೊಸ ಮದರಸಾಗಳು ಯಾವುದೇ ಅನುದಾನವನ್ನು ಪಡೆಯುವುದಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶ ಸರ್ಕಾರ ಕಳೆದ ಬಾರಿ ತನ್ನ ಕೊನೆಯ ಬಜೆಟ್ ನಲ್ಲಿ, ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ 479 ಕೋಟಿ ರೂ.ಗಳನ್ನು ವಿನಿಯೋಗಿಸಿತ್ತು, ರಾಜ್ಯದಲ್ಲಿ ಒಟ್ಟು 16,000 ನೋಂದಾಯಿತ ಮದರಸಾಗಳ 558 ಸಂಸ್ಥೆಗಳಿಗೆ ಹಣವನ್ನು ಮಂಜೂರು ಮಾಡಿದೆ.

ರಾಜ್ಯದ ಮದರಸಾಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿದ ಉತ್ತರ ಪ್ರದೇಶ ಸರ್ಕಾರವ, ಒಂದು ವಾರದೊಳಗೆ ಹೊಸ ಮದರಸಾಗಳಿಗೆ ಧನಸಹಾಯ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದೆ.

Latest Indian news

Popular Stories