ಉದ್ಧವ್ ಠಾಕ್ರೆಗೆ ನಾಳೆ “ವಿಶ್ವಾಸ ಮತ”ದ ಅಗ್ನಿ ಪರೀಕ್ಷೆ!

ಮಹಾರಾಷ್ಟ್ರ ರಾಜ್ಯಪಾಲ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಗುರುವಾರ ಬಹುಮತವನ್ನು ಸಾಬೀತುಪಡಿಸುವಂತೆ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ.

ಮೂರು ಪುಟಗಳ ಪತ್ರದ ಮೂಲಕ ನಿರ್ದೇಶನಗಳು ಬಂದಿದ್ದು, ಪ್ರಸ್ತುತ ಮಹಾರಾಷ್ಟ್ರ ರಾಜ್ಯದಲ್ಲಿ ತೆರೆದುಕೊಳ್ಳುತ್ತಿರುವ ರಾಜಕೀಯ ಸನ್ನಿವೇಶವು “ಬಹಳ ಗೊಂದಲದ ಚಿತ್ರಣ” ಚಿತ್ರಿಸುತ್ತದೆ ಎಂದು ಹೇಳಿದ್ದಾರೆ” ಶಿವಸೇನಾ ಶಾಸಕಾಂಗ ಪಕ್ಷದ 39 ಶಾಸಕರು ಮಹಾ ವಿಕಾಸ್ ಅಘಾಡಿ ಸರ್ಕಾರದಿಂದ ನಿರ್ಗಮಿಸುವ ತಮ್ಮ ಪ್ರಾಮಾಣಿಕ ಬಯಕೆ ಮತ್ತು ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದಲ್ಲಿ ವ್ಯಾಪಕ ಪ್ರಸಾರವಾಗಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಬಹುಮತದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ರಾಜ್ಯಪಾಲರ ಪತ್ರದಲ್ಲಿ ತಿಳಿಸಲಾಗಿದೆ, ಆದ್ದರಿಂದ ಆದಷ್ಟು ಬೇಗ ವಿಶ್ವಾಸ ಮತ ಯಾಚಿಸಲಿದ್ದಾರೆ.

Latest Indian news

Popular Stories