ನವದೆಹಲಿ: ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗ ಕಡಿತ ಸರದಿ ಮುಂದುವರಿದಿದ್ದು, ಈಗ ದೂರಸಂಪರ್ಕ ಸಾಧನಗಳ ತಯಾರಕ ಸಂಸ್ಥೆ ಎರಿಕ್‌ಸನ್ ಕೂಡ ಈ ಸಾಲಿಗೆ ಸೇರ್ಪಡೆಗೊಂಡಿದೆ. ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವಾದ್ಯಂತ ತನ್ನ ಸಂಸ್ಥೆಗಳ ಪೈಕಿ 8,500 ಮಂದಿಯನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
ಇತ್ತೀಚೆಗಷ್ಟೇ ಸಂಸ್ಥೆಯು ಸ್ವೀಡನ್‌ನಲ್ಲಿರುವ ತನ್ನ ಕಚೇರಿಯ 1,400 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು.
ಈ ಬೆನ್ನಲ್ಲೇ ಜಾಗತಿಕ ಉದ್ಯೋಗ ಕಡಿತ ಘೋಷಿಸಿದ್ದು, ಇದು ಈವರೆಗೆ ಟೆಲಿಕಾಂ ಕ್ಷೇತ್ರದಲ್ಲಿ ಆಗಿರುವ ಅತಿದೊಡ್ಡ ಉದ್ಯೋಗ ಕಡಿತವಾಗಿದೆ.