ಉಪ್ಪಿನಂಗಡಿ: ಇಲ್ಲಿನ ಗಾಂಧೀ ಪಾರ್ಕ್ ಬಳಿಯ ಇಂಡಿಯನ್ ಟಯರ್ ರಿಸೋಲಿಂಗ್ ಸಂಸ್ಥೆಯಲ್ಲಿ ಟಯರ್ ಮೌಲ್ಡ್ ಡಿಸ್ಕ್ ಸಿಡಿದು ಕಾರ್ಮಿಕ ರಾಜೇಶ್ (46) ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.
ಮೃತ ಕಾರ್ಮಿಕ ರಾಜೇಶ್ ಕಡಬ ತಾಲೂಕಿನ ಆಲಂಕಾರು ಗ್ರಾಮ ನಿವಾಸಿ ಎನ್ನಲಾಗಿದೆ. ಬುಧವಾರ ಟಯರ್ ಮೌಲ್ಡ್ ಡಿಸ್ಕ್ ಆಕಸ್ಮಿಕವಾಗಿ ಸಿಡಿದು ಪಕ್ಕದಲ್ಲೇ ಇದ್ದ ರಾಜೇಶ್ ಗಂಭೀರವಾಗಿ ಗಾಯಗೊಂಡರು. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.
ಮೌಲ್ಡ್ ಡಿಸ್ಕ್ ಸಿಡಿತದ ಪರಿಣಾಮ ಅಂಗಡಿಯ ಗೋಡೆ ಧ್ವಂಸವಾಗಿದೆ. ಘಟನ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಮೃತರ ಭಾವ ಜಯಂತ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.