ಉ.ಪ್ರದೇಶದಲ್ಲಿ ಬುಲ್ಡೋಝರ್ ಸದ್ದು…..,ಆದರೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬುಲ್ಡೋಜರ್‌ಗಳು ಸದ್ದು ಮಾಡಿವೆ. ಈ ಬಾರಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳು, ಉದ್ಯಾನವನಗಳು ಮತ್ತು ಕೊಳಗಳ ಮೇಲಿನ ಅತಿಕ್ರಮಣಗಳ ವಿರುದ್ಧ “ಕ್ರಮ” ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರದ ವಕ್ತಾರರ ಪ್ರಕಾರ, ಅಕ್ರಮ ಕಟ್ಟಡಗಳು ಮತ್ತು ಅತಿಕ್ರಮಣಗಳನ್ನು ಗುರುತಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

ಒತ್ತುವರಿ ಕುರಿತು ಮಾಹಿತಿಯನ್ನು ಕಂದಾಯ ಇಲಾಖೆಯ ಸಹಾಯದಿಂದ ‘ಆ್ಯಂಟಿ ಲ್ಯಾಂಡ್ ಮಾಫಿಯಾ’ (ಐಜಿಆರ್‌ಎಸ್) ವೆಬ್ ಪೋರ್ಟಲ್‌ನಲ್ಲಿ ನವೀಕರಿಸಬೇಕು ಎಂದು ಸೂಚನೆಗಳಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ನಿರ್ದೇಶನಾಲಯದ ನಿರ್ದೇಶಕರಿಗೆ ಮಾಹಿತಿ ನೀಡುವುದು ಪ್ರತಿ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಈ ಕುರಿತು ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರಿ ಜಮೀನುಗಳ ಮೇಲಿನ ಎಲ್ಲ ಒತ್ತುವರಿಗಳನ್ನು ತೆಗೆದುಹಾಕಲಾಗುವುದು’ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿಯವರೆಗೆ, ಅಪರಾಧಿಗಳ ಆಸ್ತಿಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ಅತಿಕ್ರಮಣದ ವಿರುದ್ಧ ಸರ್ಕಾರ ಬುಲ್ಡೋಝರ್ ಬಳಸಿ ಸದ್ದು ಮಾಡಿದೆ.

Latest Indian news

Popular Stories