ಎಂ.ಇ.ಎಸ್. ಜೊತೆ ಕಾಂಗ್ರೆಸ್ ಸೇರಿರುವ ಗುಮಾನಿ ಇದೆ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ಬೆಳಗಾವಿಯಲ್ಲಿ ಉದ್ದೇಶಪೂರ್ವಕವಾಗಿ ಗಲಭೆಯನ್ನು ಎಬ್ಬಿಸಲಾಗುತ್ತಿದೆ. ಎಂ.ಇ.ಎಸ್. ಜೊತೆ ಕಾಂಗ್ರೆಸ್ ಸೇರಿರುವ ಗುಮಾನಿ ಇದೆ .ಸರ್ಕಾರಕ್ಕೆ ಕೆಟ್ಟ ಹೆಸರು ತಂದು, ಅಧಿವೇಶನವನ್ನು ವಿಫಲಗೊಳಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಎಂ.ಇ.ಎಸ್. ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಅಲ್ಲ. ಕರ್ನಾಟಕದಲ್ಲಿ ಕನ್ನಡಿಗರ-ಮರಾಠಿ ಬೇಧಭಾವವಿಲ್ಲ, ಸರ್ಕಾರದ ಯೋಜನೆಗಳನ್ನು ಇಬ್ಬರಿಗೂ ನೀಡಿದ್ದೇವೆ .ಜಾತಿ-ಧರ್ಮ ನೋಡದೆ ಬಿಜೆಪಿ ಸರ್ಕಾರ ಏಖಮುಖವಾಗಿ ಯೋಜನೆ ಅನುದಾನ ಕೊಡುತ್ತಿದೆ. ಬೆಳಗಾವಿ, ಬೀದರ್, ಬಿಜಾಪುರ, ಚಿಕ್ಕೋಡಿ ಭಾಗದವರನ್ನು ಒಂದೇ ತಾಯಿ ಮಕ್ಕಳಂತೆ ನೋಡಿದ್ದೇವೆ ಎಂದರು.

ಅನಾವಶ್ಯಕವಾಗಿ ರಾಜಕೀಯ ಗಲಭೆ ಎಬ್ಬಿಸುತ್ತಿರುವವರ ಬಗ್ಗೆ ಎಚ್ಚರಗೊಳ್ಳಬೇಕಿದೆ. ಇವರ ಗೂಂಡಾ ಕಾಯ್ದೆ, ದೇಶದ್ರೋಹದ ಕಾಯ್ದೆಯಡಿ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕೆಲ್ಲಾ ಮಹಾರಾಷ್ಟ್ರ ಸರ್ಕಾರವೇ ಇದಕ್ಕೆ ಕುಮ್ಮುಕ್ಕು ನೀಡುತ್ತಿದೆ.ಮಹಾರಾಷ್ಟ್ರ ಸಿಎಂ ಮರಾಠಿಗರಿಗೆ ಮಾತ್ರ ಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಸಿಎಂ ಅಕ್ಕಪಕ್ಕದವರ ಜೊತೆ ಚೆನ್ನಾಗಿರಬೇಕು. ನೀವು ಮಹಾರಾಷ್ಟ್ರಕ್ಕೆ ಹೋಗಕ್ಕಾಗಲ್ಲ, ನಾವು ಕಳಿಸಿಲ್ಲ ಎಲ್ಲರೂ ಅಣ್ಣ-ತಮ್ಮಣ್ಣಂದಿರಂತೆ ಬದುಕಬೇಕೆಂದು ಮನವಿ ಈ ವೇಳೆ ಮನವಿ ಮಾಡಿದರು.

Latest Indian news

Popular Stories