ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬರ ಅತ್ಯಾಚಾರ ಪ್ರಕರಣದ ವರದಿ ಮಾಡಲು ಹೋಗಿ ಬಂಧಿತರಾಗಿದ್ದ ಎರಡು ವರ್ಷಗಳ ನಂತರ ಪತ್ರಕರ್ತ ಸಿದ್ದಿಕ್ ಕಪ್ಪನ್ ಬಿಡುಗಡೆಗೊಂಡಿದ್ದಾರೆ.
ಅವರ ವಿರುದ್ಧದ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದ ಒಂದು ತಿಂಗಳ ನಂತರ ಲಕ್ನೋದ ವಿಶೇಷ ನ್ಯಾಯಾಲಯವು ಅವರ ಬಿಡುಗಡೆ ಆದೇಶಕ್ಕೆ ಸಹಿ ಹಾಕಿದೆ.
“ನಾನು ಕಠಿಣ ಕಾನೂನುಗಳ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ಜಾಮೀನು ಪಡೆದ ನಂತರವೂ ಅವರು ನನ್ನನ್ನು ಜೈಲಿನಲ್ಲಿಟ್ಟರು. ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆ ಎಂದು ನನಗೆ ತಿಳಿದಿಲ್ಲ. ಈ ಎರಡು ವರ್ಷಗಳು ತುಂಬಾ ಕಠಿಣವಾಗಿತ್ತು, ಆದರೆ ನಾನು ಎಂದಿಗೂ ಹೆದರಲಿಲ್ಲ” ಎಂದು ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ.