ಎಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿರಿ -ರಾಹುಲ್ ಗಾಂಧಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಇಂದು ಕೂಡಲಸಂಗಮಕ್ಕೆ ಬಂದಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ಸಂಸತ್​ ಭವನಕ್ಕೆ ಬಸವಣ್ಣನವರ ಅನುಭವ ಮಂಟಪವೇ ಮಾದರಿ. ಬಸವಣ್ಣನವರ ಬಗ್ಗೆ ಸಿದ್ದರಾಮ ಸ್ವಾಮೀಜಿ ಚೆನ್ನಾಗಿ ಮಾತನಾಡಿದರು. ಬಸವಣ್ಣ ಇಡೀ ಜೀವನದಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದರು. ಬಹಳಷ್ಟು ಜನರಿಗೆ ಸತ್ಯ ಗೊತ್ತಾಗುತ್ತೆ, ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ. ಬಸವಣ್ಣನವರು ಎಂದೂ ಹಿಂಜರಿಯಲಿಲ್ಲ, ಸತ್ಯಕ್ಕಾಗಿ ಮುನ್ನಡೆದರು. ಸಿದ್ದರಾಮ ಸ್ವಾಮೀಜಿ ಮಾತು ಕೇಳಿ ನನಗೆ ಅತೀವ ಸಂತಸವಾಯಿತು. ಎಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿರಿ ಎಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹೇಳಿದರು.

Latest Indian news

Popular Stories