ಎಲ್ಲ ಸಮುದಾಯದ ಆರ್ಥಿಕ ದುರ್ಬಲರಿಗೆ ನೆರವು ಸಿಗಬೇಕು: ಪೇಜಾವರ ವಿಶ್ವಪ್ರಸನ್ನಶ್ರೀ

ವಿಜಯಪುರ: ಆರ್ಥಿಕವಾಗಿ ದುರ್ಬಲಾಗಿರುವ ಎಲ್ಲ‌ ಸಮುದಾಯಗಳ ಜನರಿಗೆ ಸರ್ಕಾರ, ರಾಜಕೀಯ ಪಕ್ಷಗಳು, ಸಾರ್ವಜನಿಕರು ನೆರವಿಗೆ ನಿಲ್ಲಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳು ಸಲಹೆ ನೀಡಿದರು.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದುರೆದ ಸಮುದಾಯಗಳಲ್ಲೂ ಆರ್ಥಿಕ ದುರ್ಬಲರು ಇದ್ದಾರೆ. ಹಿಂದುಳಿದ ವರ್ಗವೆಂದು ಗುರುತಿಸಿದ ಸಮುದಾಯಗಳಲ್ಲೂ ಆರ್ಥಿಕ ಪ್ರಬಲರು ಇದ್ದಾರೆ. ಹೀಗಾಗಿ ಆರ್ಥಿಕ ದುರ್ಬಲತೆ ಇರುವ ವ್ಯಕ್ತಿ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಎಲ್ಲರನ್ನೂ ಸಾಮಾಜಿಕವಾಗಿ ಮೇಲೆತ್ತಲು ಎಲ್ಲರೂ ಸಹಾಯ ಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.

ವಸುದೈವ ಕುಟುಂಬಕಂ ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇರುವ ನಾವು ಮೀಸಲಾತಿ ವಿಷಯದಲ್ಲಿ ನೀಡುವ ಹೇಳಿಕೆಗಳು ವಿವಾದ ಸೃಷ್ಟಿಸುತ್ತವೆ. ಹೀಗಾಗಿ ಆರ್ಥಿಕ ದುರ್ಬಲ ಎಲ್ಲರಿಗೂ ನೆರವು ಸಿಗಬೇಕು ಎಂದು ಆಗ್ರಹಿಸಿದರು.

ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೊದಲ ಹಂತದ ರಾಮ ಮಂದಿರ ಪೂರ್ಣವಾಗಿದೆ. ಇತರೆ ಎರಡು ಹಂತದ ಕಾಮಗಾರಿ ಮುಂದುವರೆಯಲಿದೆ. ರಾಮ ಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಸ್ಥಳದಲ್ಲಿ ಮರಳಿನಿಂದ ಕೂಡಿದ್ದರಿಂದ ಕಾಮಗಾರಿ ನಿರೀಕ್ಷಿತ ಸಮಯಕ್ಕಿಂತ ವೇಗದಲ್ಲಿ ವಿಳಂಬವಾಗಿದೆ ಎಂದರು.

Latest Indian news

Popular Stories