ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬುವುದು ಸುಳ್ಳು – ಅದಾನಿ

ಅದಾನಿ ಗ್ರೂಪ್ಸ್‌ನ ಅಧ್ಯಕ್ಷ ಮತ್ತು ಬಹುಕೋಟಿ ಉದ್ಯಮಿ ಗೌತಮ್ ಅದಾನಿ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅವರ ಸಂಬಂಧ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಇದೀಗ ಅವರ ಉದ್ದಿಮೆ ಕುಸಿಯುತ್ತಿದ್ದು ವಿರೋಧ ಪಕ್ಷಗಳು ತನಿಖೆಗೆ ಆಗ್ರಹಿಸುತ್ತಿವೆ. ಈ ಸಂದರ್ಭದಲ್ಲಿ ಮೋದಿಯೊಂದಿಗಿನ ಸಂಬಂಧ ಹೇಳಿಕೆಗಳನ್ನು “ಆಧಾರರಹಿತ” ಎಂದು ಹೇಳಿದ್ದಾರೆ. ಪ್ರಧಾನಿ ಇಬ್ಬರೂ ಒಂದೇ ರಾಜ್ಯದವರು ಎಂಬ ಕಾರಣಕ್ಕೆ ಅಂತಹ ಆರೋಪಗಳಿಂದ “ಸುಲಭ ಗುರಿ” ಮಾಡಲಾಗುತ್ತಿದೆ ಎಂದು ಹೇಳಿದರು.

“ಈ ಆರೋಪಗಳು ಆಧಾರರಹಿತವಾಗಿವೆ… ವಾಸ್ತವದ ಸಂಗತಿಯೆಂದರೆ ನನ್ನ ವೃತ್ತಿಪರ ಯಶಸ್ಸು ಯಾವುದೇ ವೈಯಕ್ತಿಕ ನಾಯಕರಿಂದಲ್ಲ” ಎಂದು ಅದಾನಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Latest Indian news

Popular Stories