“ಏ. 30 ರಂದು ಸಲ್ಮಾನ್‌ ಖಾನ್‌ ನನ್ನು ಕೊಲ್ಲುತ್ತೇನೆ”.. ಟೈಗರ್‌ಗೆ ಮತ್ತೆ ಬೆದರಿಕೆ

ಮುಂಬಯಿ: ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರಿಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಪೊಲೀಸರಿಗೆ ವ್ಯಕ್ತಿಯೊಬ್ಬ ಬೆದರಿಕೆ ಕರೆಯನ್ನು ಮಾಡಿದ್ದಾನೆ ಎಂದು ವರದಿಯಾಗಿದೆ.

ಮುಂಬಯಿ ಪೊಲೀಸ್‌ ಕಂಟ್ರೋಲ್‌ ರೂಮ್‌ ಗೆ ರಾಜಸ್ಥಾನದ ಜೋಧಪುರ ಮೂಲದ ರೋಕಿ ಭಾಯಿ ಎಂಬ ವ್ಯಕ್ತಿ ಸೋಮವಾರ ( ಏ.10 ರಂದು)  ಕರೆ ಮಾಡಿ “ನಾನು ಸಲ್ಮಾನ್‌ ಖಾನ್‌ ನನ್ನು ಏ.30 ರಂದು ಕೊಲೆ ಮಾಡುತ್ತೇನೆ” ಎಂದು ಹೇಳಿ ಬೆದರಿಕೆಯನ್ನು ಹಾಕಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬಯಿ ಪೊಲೀಸರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಕಳುಹಿಸಿದ್ದ ಆರೋಪಿಯನ್ನು ಮುಂಬೈ ಪೊಲೀಸರೊಂದಿಗೆ ರಾಜಸ್ಥಾನ ಪೊಲೀಸರು ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದರು.

ಪೂಲೀಸರು ಜೋಧ್‌ಪುರದ ಸಿಯಾಗೊ ಕಿ ಧಾನಿ ನಿವಾಸಿ ಧಕದ್ರಾಮ್ ಬಿಷ್ಣೋಯ್ ಎಂಬಾತ ಇಮೇಲ್ ಕಳುಹಿಸಿದ್ದಾನೆ ಎಂದು ಪತ್ತೆಹಚ್ಚಿ ಬಂಧಿಸಿದ್ದರು.

ಬೆದರಿಕೆ ಇಮೇಲ್‌ ಬಳಿಕ ನಟ ಸಲ್ಮಾನ್‌ ಖಾನ್‌ ಇತ್ತೀಚೆಗೆ ಬುಲೆಟ್‌ ಪ್ರೂಫ್‌ ಎಸ್‌ ಯುವಿ ಕಾರನ್ನು ಖರೀದಿಸಿದ್ದಾರೆ.

Latest Indian news

Popular Stories