ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸರ್ವಾನುಮತದ ಅನುಮೋದನೆ

ನವದೆಹಲಿ, ಸೆಪ್ಟೆಂಬರ್ 21: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಸ್ಥಾನಗಳನ್ನು ನೀಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ (Women’s Reservation Bill) ರಾಜ್ಯಸಭೆಯಲ್ಲಿಯೂ ಗುರುವಾರ ರಾತ್ರಿ ಅನುಮೋದನೆ ದೊರೆಯಿತು. ಬುಧವಾರವಷ್ಟೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಲಾಗಿತ್ತು.  ‘ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ (Nari Shakti Vandan Adhiniyam)’ ರಾಜ್ಯಸಭೆಯು ಸರ್ವಾನುಮತದಿಂದ ಅನುಮೋದನೆ ನೀಡಿದೆ.

ವಿಧೇಯಕದ ಪರ 215 ಸಂಸದರು ಮತ ಚಲಾಯಿಸಿದರೆ, ವಿರುದ್ಧ ಯಾವೊಬ್ಬ ಸಂಸದನೂ ಮತ ಚಲಾಯಿಸಿಲ್ಲ. ಎಲ್ಲ ಸದಸ್ಯರು ಮಲ್ಟಿಮೀಡಿಯಾ ಸಾಧನಗಳ ಮೂಲಕ ಮತ ಚಲಾಯಿಸಿದರು.

Latest Indian news

Popular Stories