ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ, ಲಕ್ಷಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಪಂದ್ಯ ವೀಕ್ಷಣೆ

ಅಹಮದಾಬಾದ್: ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ 4ನೇ ಟೆಸ್ಟ್ ಪಂದ್ಯಕ್ಕೆ ಅಹ್ಮದಾಬಾದ್​ನ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚಾಲನೆ ದೊರೆತಿದ್ದು, ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಸರಣಿಯಲ್ಲಿ ರೋಹಿತ್ ಬಳಗ 2-1ರಿಂದ ಮುನ್ನಡೆಯಲ್ಲಿದ್ದರೂ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಯಾರನ್ನು ಅವಲಂಬಿಸದೆ ಟೆಸ್ಟ್ ವಿಶ್ವಕಪ್ ಫೈನಲ್ ಗೇರಲು ಸಾಧ್ಯವಾಗುತ್ತದೆ. ಅತ್ತ ಆಸೀಸ್ ಇಂದೋರ್ ಟೆಸ್ಟ್ ಜಯದೊಂದಿಗೆ ವಿಶ್ವಕಪ್ಪ ಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿದ್ದು, ಮತ್ತೊಂದು ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಲು ಕಾಯುತ್ತಿದೆ.

ವಿಶೇಷ ಎಂದರೆ ಈ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್​ ಉಪಸ್ಥಿತರಿದ್ದಾರೆ. ಲಕ್ಷಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಉಭಯ ರಾಷ್ಟ್ರಗಳ ಪ್ರಧಾನಮಮಂತ್ರಿಗಳು ಪಂದ್ಯ ವೀಕ್ಷಣೆ ಮಾಡಲಿದ್ದಾರೆ.

ಎರಡು ದೇಶಗಳ ಪ್ರಧಾನಿಗಳು ಹಾಗೂ ಲಕ್ಷಾಂತರ ಕ್ರೀಡಾಭಿಮಾನಿಗಳು ಸೇರುವ ಹಿನ್ನಲೆ ಕ್ರೀಡಾಂಗಣ ಸೇರಿದಂತೆ ನಗರದಾದ್ಯಂತ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸುಮಾರು 3,000 ಖಾಕಿ ಪಡೆಯನ್ನು ನಿಯೋಜನೆ ಮಾಡಲಾಗಿದೆ.

4ನೇ ಟೆಸ್ಟ್ ನಲ್ಲಿ ಭಾರತ ಗೆದ್ದಿದ್ದೇ ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್’ಗೇರುವುದರ ಜೊತೆಗೆ ಟೆಸ್ಟ್ ರ್ಯಾಂಕಿಂಗ್ ನಲ್ಲೂ ಅಗ್ರಸ್ಥಾನಕ್ಕೇರಲಿದೆ. ಇದರೊಂದಿಗೆ ಏಕಕಾಲದಲ್ಲಿ ಮೂರು ಮಾದರಿಯಲ್ಲಿ ನ.1 ಸ್ಥಾನ ಪಡೆದ ಸಾಧನೆ ಮಾಡಲಿದೆ. ಸತತ 4ನೇ ಬಾರಿ ಬಾರ್ಡರ್-ಗವಾಸ್ತರ್ ಟ್ರೋಫಿ ಭಾರತದ ಪಾಲಾಗಲಿದೆ.

Latest Indian news

Popular Stories