ಒರಿಸ್ಸಾ: ಮೇ 1 ರಂದು ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಮೂವರು ದಲಿತ ವ್ಯಕ್ತಿಗಳು ಸತ್ತ ಹಸುವಿನ ಚರ್ಮವನ್ನು ಸುಲಿಯುತ್ತಿದ್ದಾಗ 30 ಬಜರಂಗದಳದ ಕಾರ್ಯಕರ್ತರ ಗುಂಪು ಹಲ್ಲೆ ನಡೆಸಿರುವ ಕುರಿತು ಸಿಯಾಸತ್ ಪತ್ರಿಕೆ ವರದಿ ಮಾಡಿದೆ.
ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ) ಪತ್ರಿಕಾ ಪ್ರಕಟಣೆಯ ಪ್ರಕಾರ, ಚಾಮರ್ ದಲಿತ ಸಮುದಾಯಕ್ಕೆ ಸೇರಿದ ಮೂವರು ಪುರುಷರು ಚಕರ್ಕೆಂಡ್ ಗ್ರಾಮದ ನಿವಾಸಿಗಳು. ಮೇ 1 ರಂದು ನೀಲೇಶ್ವರ ಗ್ರಾಮದ ಮೇಲ್ಜಾತಿ ಕುಟುಂಬದಿಂದ ಸತ್ತ ಹಸುವನ್ನು ತೆಗೆದುಕೊಂಡು ಹೋಗುವಂತೆ ಕರೆ ಬಂದಿತ್ತು.
ಮೂವರು ಪುರುಷರು – ಕೈಲಾಸ್ ರವಿದಾಸ್, ಬಿಘನ್‌ರಾಜ್ ಮೆಹರ್ ಮತ್ತು ದುಖು ಮೆಹರ್ – ಸತ್ತ ಹಸುವನ್ನು ತೆಗೆದುಕೊಂಡು ಅದರ ಚರ್ಮವನ್ನು ಸುಲಿಯುತ್ತಿದ್ದಾಗ ಕನಿಷ್ಠ 30 ಬಜರಂಗದಳದ ಗೂಂಡಾಗಳು ಅವರನ್ನು ಸುತ್ತುವರೆದು ಕೃತ್ಯ ಎಸಗಿದ್ದಾರೆಂದು ಹೇಳಿದ್ದಾರೆ.
ಗೋಹತ್ಯೆ ಸಂಭವಿಸಿದೆ ಎಂದು ಭಾವಿಸಿ, ಗೂಂಡಾಗಳು ಅವರ ಮೇಲೆ ಕ್ರೂರವಾಗಿ ಹಲ್ಲೆ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ಅವರಲ್ಲಿ ಒಬ್ಬರು ಪ್ರಜ್ಞೆ ತಪ್ಪಿದ್ದಾರೆ.
ಬುಧವಾರ, AILAJ ಒಡಿಶಾದ ವಕೀಲ ಸೀತಾರಾಮ್ ಮೆಹರ್ ಅವರು ಪುರಿಯ ಸದರ್ ಪೊಲೀಸ್ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಗಾಯಗೊಂಡಿರುವ ಮೂವರಿಗೆ ಉಚಿತ ವೈದ್ಯಕೀಯ ಸೇವೆ ನೀಡಬೇಕು ಎಂದು ಸಂತ್ರಸ್ತ ಸಮುದಾಯ ಒತ್ತಾಯಿಸಿದೆ. ಎಫ್‌ಐಆರ್ ದಾಖಲಾಗಿದೆ.