ಬೆಂಗಳೂರು: ಸದಾ ಒಂದಲ್ಲೊಂದು ವಿಚಾರ, ಟೀಕೆಗಳ ಮೂಲಕ ಸುದ್ದಿಯಾಗುವ ನಟ ಚೇತನ್ ಇದೀಗ ಮತ್ತೆ ಹೊಸ ವಿವಾದವೊಂದು ಸೃಷ್ಟಿಸಿದ್ದಾರೆ.
ಹಿಮಾಚಲ ಮುಖ್ಯಮಂತ್ರಿ ಸುಖು ಗಾಂಜಾ ವಿಚಾರವಾಗಿ ಮಾತನಾಡಿದ್ದನ್ನು ಅನುಮೋದಿಸುವ ಮೂಲಕ ‘ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದು ನಟ ಚೇತನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೇಸ್ ಬುಕ್ ನಲ್ಲಿ ಬರೆದುಕೊಂಡ ಚೇತನ್, ಹಿಮಾಚಲದ ಮುಖ್ಯಮಂತ್ರಿಯ ನಡೆಯು ಒಳ್ಳೆಯದು ಕರ್ನಾಟಕವೂ ಇದರತ್ತ ಗಮನ ಹರಿಸುವ ಮೂಲಕ ಗಾಂಜಾ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5 ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ.
ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು’ ಎನ್ನುವ ಮೂಲಕ ಹಿಮಾಚಲ ಮುಖ್ಯಮಂತ್ರಿ ಸುಖು ಗಾಂಜಾ ವಿಚಾರವನ್ನು ಶ್ಲಾಘನೆ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.