ಕಚ್:ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ದೇವಸ್ಥಾನ ಪ್ರವೇಶಿಸಿದ ಜಿಗ್ನೇಶ್ ಮೆವಾನಿ

ಗಾಂಧಿನಗರ: ಗುಜರಾತ್‌ನಲ್ಲಿ ದಲಿತ ಸಮುದಾಯದ ಮೇಲಿನ ದೌರ್ಜನ್ಯದ ವಿರುದ್ಧದ ಆಂದೋಲನದ ಭಾಗವಾಗಿ, ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಏಕೈಕ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಅವರು ಪ್ರತಿಭಟನೆಯ ಸಂಕೇತವಾಗಿ ಕಚ್‌ನ ರಾಪರ್ ತಾಲೂಕಿನ ವರ್ಣು ಗ್ರಾಮದದಲ್ಲಿ ಇತರ ದಲಿತ ಸದಸ್ಯರೊಂದಿಗೆ ಸೇರಿ ಸೋಮವಾರ ದೇವಸ್ಥಾನಕ್ಕೆ ಪ್ರವೇಶಿಸಿದರು.

ವರ್ಣು ಗ್ರಾಮದ ದಲಿತ ನಿವಾಸಿಗಳಿಂದ ದೂರನ್ನು ಸ್ವೀಕರಿಸಿದ ಜಿಗ್ನೇಶ್ ಮೇವಾನಿ ರಾಷ್ಟ್ರೀಯ ಸಂಚಾಲಕರಾಗಿರುವ ರಾಷ್ಟ್ರೀಯ ದಲಿತ ಅಧಿಕಾರ ಮಂಚ್ ತಂಡದೊಂದಿಗೆ ದೇವಸ್ಥಾನಕ್ಕೆ ತಲುಪಿದರು. ಮೇವಾನಿ ಅವರ ಸಮ್ಮುಖದಲ್ಲಿ ದಲಿತ ಸಮುದಾಯದ ಜನರು ದೇವಾಲಯದ ಒಳಗೆ ಪ್ರವೇಶವನ್ನು ಮಾಡಿದರು.

“ದೇವಾಲಯವು ಎರಡು ಆವರಣಗಳನ್ನು ಹೊಂದಿದೆ ಮತ್ತು ದಲಿತರಿಗೆ ಪ್ರಾಥಮಿಕ ಭಾಗಕ್ಕೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ ಮತ್ತು ಒಳಗಿನ ಗರ್ಭಗುಡಿಯು ಮೇಲ್ವರ್ಗದ ಜನರಿಗೆ ಮಾತ್ರ ಮೀಸಲಾಗಿದೆ” ಎಂದು ಮೇವಾನಿ ಐಎಎನ್‌ಎಸ್‌ಗೆ ತಿಳಿಸಿದರು.

ಈಗ ನನ್ನ ಪ್ರಶ್ನೆ ಏನೆಂದರೆ – ಪ್ರತಿಯೊಬ್ಬ ನಾಗರಿಕನಿಗೂ ಒಳಗೆ ಪ್ರವೇಶವನ್ನು ಏಕೆ ಅನುಮತಿಸುವುದಿಲ್ಲ ಮತ್ತು ಕೇವಲ ಮೇಲ್ಜಾತಿಯವರಿಗೆ ಮಾತ್ರ ಏಕೆ? ಎಂದು ಪ್ರಶ್ನಿಸಿದರು.

“ಪ್ರಾಧಿಕಾರದ ಸಮ್ಮುಖದಲ್ಲಿ, ನಾವು ‘ಗರ್ಭ ಗೃಹ’ಕ್ಕೆ ಪ್ರವೇಶ ಮಾಡಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿದ್ದೇವೆ. ಆದರೆ ದೇವಸ್ಥಾನದ ಅಧಿಕಾರಿಗಳಿಂದ (ಪೂಜಾರಿ-ನಹಂತ್) ಅತ್ಯಂತ ತಣ್ಣನೆಯ ಸ್ವಾಗತ ಮಾಡಿದರು.ಬಿಜೆಪಿ ಕೇಂದ್ರ ಕಚೇರಿ ಕಮಲಂನಲ್ಲಿ ನನಗೆ ತಣ್ಣನೆಯ ಸ್ವಾಗತ ಸಿಗುತ್ತದೆ, ”ಎಂದು ಮೇವಾನಿ ನಕ್ಕರು.

ಪ್ರವೇಶದ ನಂತರ ಮೇವಾನಿ ಅವರು ವರ್ಣು ಗ್ರಾಮದಲ್ಲಿ ವಾಸಿಸುವ ಇತರ ಸಮುದಾಯದ ಜನರೊಂದಿಗೆ ಸಭೆ ನಡೆಸಿದರು. ಮೇವಾನಿ ಅವರಿಗೆ, “ನಾವು ದೇವಸ್ಥಾನವನ್ನು ಪ್ರವೇಶಿಸಬಹುದು ಎಂದು ತೋರಿಸುವುದು ಇದರ ಮುಖ್ಯ ಉದ್ದೇಶ. ನಮ್ಮ ಶಕ್ತಿ ಪ್ರದರ್ಶನ ಇದಲ್ಲ. ಆದರೆ ನಾವು ನಿಮ್ಮೊಂದಿಗೆ ಕೈ ಜೋಡಿಸಿ ನಿಮ್ಮ ಪರವಾಗಿ ನಿಲ್ಲಲು ಬಂದಿದ್ದೇವೆ. ನಾವು ಒಬ್ಬರನ್ನೊಬ್ಬರು ನಮ್ಮವರೆಂದು ಪರಿಗಣಿಸೋಣ ಮತ್ತು ನಮ್ಮ ಸಹ ಗ್ರಾಮಸ್ಥರೊಂದಿಗೆ ಸಹೋದರತೆ ಭಾವನೆಯನ್ನು ಕಾಪಾಡಿಕೊಳ್ಳೋಣ ಎಂದು ಕರೆ ನೀಡಿದರು.

Latest Indian news

Popular Stories

error: Content is protected !!