ಕಲುಷಿತ ನೀರು ಸೇವಿಸಿ 21 ಮಂದಿ ಅಸ್ವಸ್ಥ ಪ್ರಕರಣ: ಗ್ರಾಮ ಪಂಚಾಯತ್​ ಪಿಡಿಒ ಅಮಾನತು

ಬೀದರ್​: ಕಲುಷಿತ ನೀರು ಸೇವಿಸಿ 21 ಜನ ಅಸ್ವಸ್ಥಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಟನಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೆಂದ್ರಪ್ಪ ಅವರನ್ನು ಅಮಾನತು ಮಾಡಿ ತಾಲೂಕು ಪಂಚಾಯತಿ ಸಿಇಒ ಮಾಣಿಕ್ ರಾವ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಬೀದರ್ ತಾಲ್ಲೂಕಿನ ಚಟನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರೀದಾಬಾದ ಗ್ರಾಮದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಂಡಿದ್ದರು. ಈ ವಿಚಾರವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ತಿಳಿಸದೆ ಕಾಮಗಾರಿ ಕೈಗೊಂಡಿದ್ದಾರೆ. ಈ ಕಾಮಗಾರಿಯನ್ನು ಕುಡಿಯುವ ನೀರಿನ ಪೈಪ್​ಲೈನ್​ ಹಾದು ಹೋದ ದಾರಿಯಲ್ಲೇ ನಡೆದಿದೆ.

ಇದರಿಂದ ಕುಡಿಯುವ ನೀರಿನ ಪೈಪ್​​ಲೈನ್​ಗೆ ಹಾನಿಯಾಗಿ ಜು. 25 ರಂದು ಚರಂಡಿಯ ಕಲುಷಿತ ನೀರು ಪೈಪ್‌ಲೈನ್ ನೀರಿಗೆ ಸೇರಿದೆ. ಇದೇ ನೀರನ್ನು ಕುಡಿದು 21 ಜನರು ಅಸ್ವಸ್ಥಗೊಂಡಿದ್ದಾರೆ.

ಇವರನ್ನು ಕೂಡಲೇ ಜಿಲ್ಲಾ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 11 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದ 10 ಜನ ಬೀದರ್ ನ ವಾಸು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜು.25 ರಂದು ಘಟನೆ ನಡೆದಿದ್ದು, ಗ್ರಾಮ ಪಂಚಾಯತಿ ಪಿಡಿಒ ದೇವೆಂದ್ರಪ್ಪ ತಾಲೂಕು ಪಂಚಾಯತಿ ಸಿಇಒ ಮಾಣಿಕ್ ರಾವ್ ಪಾಟೀಲ್ ಅವರಿಗೆ ಕೂಡಲೇ ವರದಿ ನೀಡದೆ ಜು.28 ರಂದು ಸಾಯಂಕಾಲ 5:30 ಕ್ಕೆ ತಡವಾಗಿ ವರದಿ ನೀಡಿದ್ದಾರೆ. ಇದರಂತೆ ಕರ್ತವ್ಯ ಲೋಪ ಎಸಗಿದ್ದಾರೆಂದು ಪಿಡಿಒ ದೇವೆಂದ್ರಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Latest Indian news

Popular Stories