ಕಲಬುರಗಿ: ಕಮಲಾಪುರ ತಾಲೂಕಿನ ಮರಗುತ್ತಿ ಬಳಿಯಿರುವ ಟನಲ್ ನಲ್ಲಿ ಮಳೆಯಿಂದಾಗಿ ದೊಡ್ಡ ಕಲ್ಲು ಬಿದ್ದಿರುವುದರಿಂದ ಕಲಬುರಗಿ- ಬೀದರ್ ರೈಲು ಟನಲ್ ನಲ್ಲಿ ಸಿಕ್ಕಿ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕಲ್ಲು ಉರುಳಿ ಬಿದ್ದ ಪರಿಣಾಮ ಕಲ್ಲು ರೈಲಿಗೆ ತಾಗಿ ಟನಲ್ ನಲ್ಲೇ ರೈಲು ನಿಂತಿದ್ದು, ಪ್ರಯಾಣಿಕರು ಭಯದಲ್ಲಿದ್ದಾರೆಂದು ಗೊತ್ತಾಗಿದೆ.
ಈ ಕುರಿತು ಮಾಹಿತಿ ನೀಡಲು ರೈಲ್ವೆ ಅಧಿಕಾರಿಗಳ ಸಂಪರ್ಕ ಸಾಧ್ಯವಾಗಿಲ್ಲ. ಜೀವಕ್ಕೆ ಅಪಾಯವೇನು ಇಲ್ಲ. ಕಳೆದ ರಾತ್ರಿ ಮಳೆಯಾದ ಹಿನ್ನೆಲೆ ಟನಲ್ ಒಳಗೆ ಹಸಿಯುಂಟಾಗಿ ಕಲ್ಲು ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ.
ಬೆಳಗ್ಗೆ ಕಲಬುರಗಿಯಿಂದ ಬೀದರ್ ಗೆ ಹೊರಟ ರೈಲು ಇದಾಗಿದ್ದು, ಟನಲ್ ಒಳಗೆ ಸಿಲುಕಿದೆ ಎಂದು ತಿಳಿದು ಬಂದಿದೆ.