ಕಳೆದ 9 ವರ್ಷಗಳಲ್ಲಿ, ನಾವು ಹಳೆಯ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸಿದ್ದೇವೆ – ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ: ಪ್ರತಿಪಕ್ಷಗಳು ಒಟ್ಟಾಗಿ ಸಭೆ ನಡೆಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ಮೇಲೆ ಕಟುವಾದ ಟೀಕೆ ಮಾಡಿದ್ದಾರೆ. ” ಮೊದಲು ಕುಟುಂಬ ಮೊದಲು ಮತ್ತು ರಾಷ್ಟ್ರಕ್ಕೆ ಏನಿಲ್ಲ” ಎನ್ನುವುದು ಪ್ರತಿಪಕ್ಷಗಳ ಧ್ಯೇಯವಾಕ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ (ಎನ್‌ಐಟಿಬಿ) ಉದ್ಘಾಟನೆಯ ನಂತರ ವರ್ಚುವಲ್ ಭಾಷಣದಲ್ಲಿ ಪ್ರಧಾನಿ, ವಿರೋಧ ಪಕ್ಷಗಳು ವೈಯಕ್ತಿಕ ಲಾಭಗಳಲ್ಲಿ ಮಾತ್ರ ಆಸಕ್ತಿ ಹೊಂದಿವೆ ಎಂದು ಹೇಳಿದರು.

“ಅವರ ಮಂತ್ರ – ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ. ತಮ್ಮಲ್ಲಿರುವ ಭ್ರಷ್ಟರನ್ನು ರಕ್ಷಿಸಲು ಪ್ರತಿಪಕ್ಷಗಳು ಒಂದಾಗುತ್ತವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಬೆಂಗಳೂರಿನಲ್ಲಿಂದು 26 ಪಕ್ಷಗಳು ಸೇರಿ ಸಭೆ ಮಾಡುತ್ತಿವೆ. ಕಾಂಗ್ರೆಸ್ ಸೇರಿ ಎನ್ ಡಿಎ ಹೊರತುಪಡಿಸಿದ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ಒಂದಾಗಿ ಎದುರಿಸುವ ಬಗ್ಗೆ ಚರ್ಚೆ ನಡೆಸುತ್ತಿವೆ. ಇದೇ ವೇಳೆ ಮೋದಿ ಟೀಕೆ ಮಾಡಿದ್ದಾರೆ.

“ಅಲ್ಲಿ ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ ನಡೆಯುತ್ತಿದೆ” ಎಂದ ಅವರು, “ಕಳೆದ 9 ವರ್ಷಗಳಲ್ಲಿ, ನಾವು ಹಳೆಯ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸಿದ್ದೇವೆ ಮಾತ್ರವಲ್ಲದೆ ಜನರಿಗೆ ಹೊಸ ಸೌಲಭ್ಯಗಳು ಮತ್ತು ಮಾರ್ಗಗಳನ್ನು ಒದಗಿಸಿದ್ದೇವೆ. ಇಂದು, ಭಾರತದಲ್ಲಿ ಹೊಸ ಅಭಿವೃದ್ಧಿಯ ಮಾದರಿಯಾಗಿದೆ. ಇದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾದರಿಯಾಗಿದೆ” ಅವರು ಹೇಳಿದರು.

Latest Indian news

Popular Stories