ಕಸ್ತೂರಿ ರಂಗನ್ ವರದಿ ಮತ್ತು ಹುಲಿ ಯೋಜನೆ ಕೈ ಬಿಡಲು ಆಗ್ರಹಿಸಿದ ಮಾಜಿ ಸಚಿವ ರಮಾನಾಥ್ ರೈ

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನಲ್ಲಿ ವಾಸಿಸುವ ಜನತೆಯ ಹಿತವನ್ನು ಪರಿಗಣಿಸಿ ಕಸ್ತೂರಿ ರಂಗನ್‌ ವರದಿ ಹಾಗೂ ಹುಲಿ ಯೋಜನೆಯನ್ನು ಕೈಬಿಡಬೇಕು ಎಂದು ಕೇಂದ್ರ ಸರಕಾರವನ್ನು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ರಾಜ್ಯದ ಕಾಂಗ್ರೆಸ್‌ ಸರಕಾರದಲ್ಲಿ ನಾನು ಅರಣ್ಯ ಸಚಿವ ನಾಗಿದ್ದ ಸಂದರ್ಭ ಕೇಂದ್ರ ಸರಕಾರ ಕಸ್ತೂರಿ ರಂಗನ್‌ ವರದಿಯ ಕರಡು ಪ್ರತಿ ಸಿದ್ಧಪಡಿಸಿತ್ತು. ಇದನ್ನು ಜಾರಿಗೊ ಳಿಸಿದರೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ವಾಸಿಸುವ ಅನೇಕ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ದೂರು ಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ಪಶ್ಚಿಮ ಘಟ್ಟದಲ್ಲಿ ಈಗಾಗಲೇ ರಕ್ಷಿತಾರಣ್ಯ, ರಾಷ್ಟ್ರೀಯ
ಉದ್ಯಾನವನ, ಮೀಸಲು ಅರಣ್ಯ, ಅಭಯಾರಣ್ಯ ಮುಂತಾದ ಸೂಕ್ಷ್ಮ ವಲಯಗಳು ಜಾರಿಯಲ್ಲಿರುವುದ ರಿಂದ ಕಸ್ತೂರಿ ವರದಿ ಜಾರಿ ಬೇಡ ಎಂದು ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು ಎಂದರು.

ಆಗ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಿದ್ದ ಬಿಜೆಪಿಯೇ ಇದೀಗ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕೇಂದ್ರ ದಲ್ಲೂ ಬಿಜೆಪಿ ಸರಕಾರವೇ ಇರುವುದರಿಂದ ವರದಿಯನ್ನು ರದ್ದುಪಡಿಸಬಹು ದಾಗಿದೆ ಎಂದರು.

ಇದೇ ರೀತಿ ಹುಲಿ ಯೋಜನೆ ಜಾರಿ ಯಾಗುತ್ತದೆ ಎಂದು ಬಿಜೆಪಿಯವರು ಗುಲ್ಲೆಬ್ಬಿಸಿದ್ದರು. ಇದೀಗ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿದೆ. ಜಾರಿಗೊಳಿಸದಂತೆ ರಾಜ್ಯದ ಬಿಜೆಪಿ ಕೇಂದ್ರವನ್ನು ಆಗ್ರಹಿಸಲಿ ಎಂದರು.

Latest Indian news

Popular Stories