ಕಾಂಗ್ರೆಸ್’ನ ಪ್ರಭಾವಿ ನಾಯಕರ ಮುಂದೆ ತೊಡೆ ತಟ್ಟಿದ ಎಸ್.ಡಿ.ಪಿ.ಐಗೆ ಭಾರೀ ನಿರಾಸೆ – 16 ಕ್ಷೇತ್ರದಲ್ಲಿ ಗಳಿಸಿದ ಮತಗಳ ವಿವರ

ಬೆಂಗಳೂರು: ಚುನಾವಣೆ ಬಹಳಷ್ಟು ರಾಜಕೀಯ ಪ್ರಭಾವಿಗಳ ಜೀವನದ ದಿಕ್ಕನೇ ಬದಲಾಯಿಸಿದೆ. ಪ್ರಭಾವಿಗಳು ಸೋತು ಸುಣ್ಣಾಗಿದ್ದಾರೆ. ಈತನ್ಮಧ್ಯೆ ಚುನಾವಣೆಯ ಮುನ್ನ ಸದ್ದು ಮಾಡಿದ್ದ ಎಸ್.ಡಿ.ಪಿ.ಐ ಫಲಿತಾಂಶದಲ್ಲಿ ಮಾತ್ರ ನಿರೀಕ್ಷಿತ ಮಟ್ಟ ತಲುಪಲೇ ಇಲ್ಲ. ನರಸಿಂಹ ರಾಜ ಕ್ಷೇತ್ರದಲ್ಲಿ ಮಾತ್ರ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿರುವ ಎಸ್.ಡಿ.ಪಿ‌ಐ ಕಳೆದ ಮೂರು ಬಾರಿ ಈ ಕ್ಷೇತ್ರದಲ್ಲಿ ನೆಲಕಚ್ಚಿದೆ. ಇನ್ನು ಹೇಗಾದರೂ ಮಾಡಿ ಯುಟಿ ಖಾದರ್ ಅವರನ್ನು ಸೋಲಿಸಬೇಕೆಂದಿದ್ದ ಎಸ್.ಡಿ.ಪಿ.ಐ ಅಲ್ಲು ನಿರಾಸೆ ಅನುಭವಿಸಿದೆ. ಪುಲಿಕೇಶಿ ನಗರದಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಪಕ್ಷಕ್ಕೆ ಪ್ರಾಪ್ತಿಯಾಗಿದ್ದ ನಾಲ್ಕು ಸಹಸ್ರ ಮತಗಳು ಮಾತ್ರ. ಸದ್ದು ಮಾಡಿದಷ್ಟು ಮತ ಗಳಿಸದ ಎಸ್.ಡಿ.ಪಿ.ಐ ಅಪ್ರಸ್ತುತಗೊಂಡಿದೆಯೇ ಎಂಬ ಪ್ರಶ್ನೆ ಒಂದು ಕಡೆಯಾದರೆ ಮುಸ್ಲಿಮರನ್ನು ಕೇಂದ್ರಿಕೃತವಾಗಿ ಚುನಾವಣೆ ಎದುರಿಸುವ ಎಸ್.ಡಿ.ಪಿ.ಐ ಸಮುದಾಯದಲ್ಲೂ ಮನ್ನಣೆ ಪಡೆಯುವಲ್ಲಿ ಸೋತಿದೆ ಎಂಬುವುದಕ್ಕೆ ಈ ಚುನಾವಣೆ ಸಾಕ್ಷಿ ವಹಿಸಿದೆ.

ಎಸ್.ಡಿ.ಪಿ‌ಐ ಅಭ್ಯರ್ಥಿಗಳ ಕ್ಷೇತ್ರ ಮತ್ತು‌ ಪಡೆದ ಮತ

1.ಪುಲಿಕೇಶಿ ನಗರ – ಬಾಸ್ಕರ್ ಪ್ರಸಾದ್ – 4097
2.ನರಸಿಂಹರಾಜ ಮಜೀದ್ ಖಾನ್ -40963
3.ಸರ್ವಜ್ಞ ನಗರ ಅಬ್ದುಲ್ ಹನ್ನಾನ್-2995
4.ಬಂಟ್ವಾಳ ಇಲ್ಯಾಸ್ ತುಂಬೆ-5436
5.ಬೆಳ್ತಂಗಡಿ ಅಕ್ಬರ್ -2513
6.ಪುತ್ತೂರು ಶಾಫಿ ಬೆಳ್ಳಾರೆ-2788
7.ಮೂಡಬಿದ್ರೆ ಅಲ್ಫಾನ್ಸೋ ಫ್ರಾಂಕೊ -3617
8.ಚಿತ್ರದುರ್ಗ ಬಾಳೆಕಾಯಿ ಶ್ರೀನಿವಾಸ್ -2555
9.ತೇರದಾಳ ಯಮನಪ್ಪ ಗುಣದಾಳ-3527
10.ಮಡಿಕೇರಿ ಅಮೀರ್ ಮೋಹಸಿನ್-1436
11.ಮೂಡಿಗೆರೆ ಚಂದು ಅಂಗಡಿ-265
12.ರಾಯಚೂರು ಸಯ್ಯದ್ ಇಶಾಕ್-623
13.ದಾವಣಗೆರೆ ಇಸ್ಮಾಯಿಲ್ ಝಬಿಯುಲ್ಲಾ-1311
14.ಕಾಪು ಹನೀಫ್ ಮೂಳೂರು-1616
15.ಹುಬ್ಬಳ್ಳಿ ವಿಜಯ್ ಗುಂಟ್ರಲ್-1360
16.ಮಂಗಳೂರು ರಿಯಾಝ್ ಪರಂಗಿಪೇಟೆ-15054

Latest Indian news

Popular Stories