ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ : ಯು. ಆರ್. ಸಭಾಪತಿ.

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಒಂದು ರಾಷ್ಟೀಯ ಪಕ್ಷ ವಾಗಿದ್ದು ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಉಡುಪಿ ಯ ಮಾಜಿ ಶಾಸಕ ಶ್ರೀ ಯು. ಆರ್. ಸಭಾಪತಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ದಲ್ಲಿದ್ದಾಗ ಪ್ರಥಮ ಬಾರಿಗೆ ಸಚಿವ ಸ್ಥಾನ ನೀಡಿತ್ತು. ಪಕ್ಷದ ಸಂಕ್ಟಷ್ಟ ಕಾಲದಲ್ಲಿ ಪಕ್ಷ ಸಂಘಟನೆಯ ಯಾವುದೇ ಕಾರ್ಯಕ್ಕೆ ತನ್ನನ್ನು ತೊಡಗಿಸಿ ಕೊಳ್ಳದೆ ಕೊರೊನ ಸಂಕಷ್ಟ ಪರಿಸ್ಥಿತಿಯಲ್ಲೂ ಜನಸೇವೆ ಮಾಡದೇ ಮನೆಯಲ್ಲೇ ರಾಜಕೀಯ ಮಾಡುತಿದ್ದರು. ಇನ್ನು ಮುಂದೆ ನಿಸ್ಸಂದೇಹ ವಾಗಿ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಬಲಾಡ್ಯಾ ವಾಗಿ ಕಟ್ಟುವುದಕ್ಕೆ ತಾನು ಶ್ರಮಿಸುವುದಾಗಿ ಶ್ರೀ ಸಭಾಪತಿ ಹೇಳಿದ್ದಾರೆ.

ಅಧಿಕಾರದ ಆಸೆಯಿಂದ ಬಿಜೆಪಿ ಅವರನ್ನು ಸೇರ್ಪಡೆ ಗೊಳಿಸಿದರೆ ಬಿಜೆಪಿಗೂ ನಾಳೆ ದ್ರೋಹ ಬಗೆಯುವುದು ಸರ್ವ ವಿಧಿತ ಎಂದು ಅವರು ಬಿಜೆಪಿ ನಾಯಕರನ್ನು ಎಚ್ಚರಿಸಿದಾರೆ. ಹಿಂದೆ ಅವರ ತಾಯಿ ಮನೋರಮಾ ಮದ್ವರಾಜ್ ರವರು ಸಾಕಷ್ಟು ಬಾರಿ ಕಾಂಗ್ರೆಸ್ ಸರಕಾರ ದಲ್ಲಿ ಮಂತ್ರಿ ಯಾಗಿದ್ದು ಕೊನೆ ಗಳಿಗೆ ಯಲ್ಲಿ ಬಿಜೆಪಿ ಸಂಸದೆ ಯಾಗಿ ಬಿಜೆಪಿಗೆ ಏನು ಮಾಡಿದರೆಂದು ಬಿಜೆಪಿ ನಾಯಕರು ಯೋಚಿಸಬೇಕಾಗಿದೆ

Latest Indian news

Popular Stories