ಕಾಂಗ್ರೆಸ್, ಬಿಜೆಪಿ ವಿರುದ್ಧ ‘ಸಿಡಿ’ದೆದ್ದ ಕುಮಾರಸ್ವಾಮಿ

ವಿಜಯಪುರ: ಅವ್ರು ಸಿ.ಡಿ ಮತ್ತೊಂದು ಇಟ್ಕೊಂಡು ಹೊರಟಿದ್ದಾರೆ. ಅವರಿಗೆ ಸಿ.ಡಿ ಚಿಂತೆ ಇದೆ ನನಗೆ ಜನತೆ ಚಿಂತೆ ಇದೆ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಸಿ.ಡಿ ಮತ್ತೊಂದು ಅದನ್ನೆಲ್ಲಾ ಅವರು ಮುಂದುವರೆಸಿಕೊಂಡು ಹೋಗಲಿ. ನಾನು ನನ್ನ ಜನರ ಪರವಾದ ಧ್ವನಿ ಎತ್ಕೊಂಡು ಹೋರಾಟ ಮಾಡ್ತೀನಿ ಎಂದರು.

ನನಗೆ ಬೇಕಾಗಿರುವುದು ನಮ್ಮ ನಾಡಿನ ಜನರ ಬದುಕು. ಇವತ್ತು ರೈತರು ಕಂಗಾಲಾಗಿದ್ದಾರೆ, ಯುವಕರಿಗೆ ಉದ್ಯೋಗ ಇಲ್ಲ. ಇವತ್ತು ಹಳ್ಳಿಗಳಲ್ಲಿ ತಮ್ಮ ಪ್ರತಿನಿತ್ಯದ ಬದುಕಿಗಾಗಿ ಮಹಿಳೆಯರು ನೋವು ಅನುಭವಿಸುತ್ತಿದ್ದಾರೆ. ಇದನ್ನ ಸರಿಪಡಿಸೋದು ಹೇಗೆ ಅನ್ನೋದು ನನ್ನ ಚಿಂತೆ ಆಗಿದೆ.

ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಮಾತನಾಡುವುದರಲ್ಲಿ ಅರ್ಥವೆ ಇಲ್ಲ. ಆ ಬಜೆಟ್ ನಲ್ಲಿ ಹುಳುಕುಗಳು ದೊಡ್ಡ ಮಟ್ಟದಲ್ಲಿವೆ ಎಂದರು.

Latest Indian news

Popular Stories