ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನು ಸುರಕ್ಷಿತವಾಗಿ ಇಟ್ಟಿದೆ.ಇನ್ನೊಮ್ಮೆ ನಿಮಗೆ ಡಬಲ್ ಇಂಜಿನ್ ಸರ್ಕಾರ ಬೇಕು ಬೇಡವೋ?. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಮತ್ತೊಮ್ಮೆ ಪಿಎಫ್ ಐ ಸಕ್ರಿಯವಾಗುತ್ತದೆ. ನಾವು ಪಿ ಎಫ್ ಐ ಬ್ಯಾನ್ ಮಾಡಿ ಅದರ ನಾಯಕರನ್ನು ಜೈಲಿಗೆ ಅಟ್ಟಿದ್ದೇವೆ ಎಂದು ಅಮಿತ್ ಶಾ ಹೇಳಿದರು.
ಅವರಿಂದು ಬೈಂದೂರಿಗೆ ಆಗಮಿಸಿ ಬಿಜೆಪಿ ಪರ ಮತ ಯಾಚಿಸಿದರು. ಪಿ ಎಫ್ ಐ ನ ಗುಂಡಾಗಳು ಜೈಲಿನಿಂದ ಹೊರಬರಬೇಕಾ? ಪಿ ಎಫ್ ಐ ಗುಂಡಾಗಳು ಹೊರ ಬರಬಾರದು ಅಂದರೆ ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಬೇಕು ಎಂದು ಹೇಳಿದರು.
ನಾವು ನಾಲ್ಕು ಪರ್ಸೆಂಟ್ ಮುಸ್ಲಿಂ ಮೀಸಲಾತಿ ಸಮಾಪ್ತಿ ಮಾಡಿದ್ದೇವೆ. ನಮ್ಮ ಸರ್ಕಾರ ಬಂದರೆ ಮತ್ತೆ ಮುಸ್ಲಿಂ ಮೀಸಲಾತಿ ಆರಂಭಿಸುವುದಾಗಿ ಕಾಂಗ್ರೆಸ್ ಹೇಳುತ್ತದೆ. ಮತ್ತೆ ಮುಸ್ಲಿಂ ರಿಸರ್ವೇಶನ್ ಪ್ರಾರಂಭಿಸಬೇಕಾ?
2024ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಾ?ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ಜೋರಾಗಿ ಜಯ ಘೋಷ ಕೂಗಿ ಎಂದು ಹೇಳಿದ ಅವರು, ಮೋದಿ ಮತ್ತೆ ಪ್ರಧಾನಿ ಆಗಬೇಕಾದರೆ ಬೈಂದೂರಿನಲ್ಲಿ ನಮ್ಮ ಅಭ್ಯರ್ಥಿ ಆಯ್ಕೆಯಾಗಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದರೆ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರುತ್ತೆ ಎಂದರು.
ಕರಾವಳಿ ಕರ್ನಾಟಕವನ್ನು ಸುರಕ್ಷಿತವಾಗಿ ಹಿಡಿದು ಬಿಜೆಪಿಗೆ ಮಾತ್ರ ಸಾಧ್ಯ. ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಕಾಂಗ್ರೆಸ್ ಕರಾವಳಿ ಕರ್ನಾಟಕವನ್ನು ಸುರಕ್ಷಿತವಾಗಿ ಇಡಲು ಬಯಸುವುದಿಲ್ಲ.ಅಡಿಕೆ ಬೆಳೆಗಾರರಿಗೆ ಬೆಂಬಲ ಕೊಟ್ಟಿದ್ದೆ ಬಿಜೆಪಿ ಸರ್ಕಾರ. ಕರಾವಳಿಯಲ್ಲಿ ನೂತನ ಬಂದರು ನಿರ್ಮಿಸಿ ಮೀನುಗಾರರಿಗೆ ಸುರಕ್ಷತೆ ನೀಡಿದ್ದು ಬಿಜೆಪಿ. ಪ್ರವೀಣ್ ನೆಟ್ಟಾರು ಕೊಲೆಗಾರರನ್ನು ಹುಡುಕಿ ಹುಡುಕಿ ಜೈಲಿಗೆ ಹಾಕಿದ್ದು ಬಿಜೆಪಿಯಾಗಿದೆ. ಪಿ ಎಫ್ ಐ ಗುಂಡಾಗಳನ್ನು ಜೈಲಿಗಟ್ಟಿದ್ದೇವೆ. 50,000 ಮತಗಳಿಂದ ಬೈಂದೂರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ವಿಜಯೋತ್ಸವಕ್ಕೆ ನಾನು ಬರುತ್ತೇನೆ ಎಂದು ಹೇಳಿದರು.