ಮೈಸೂರು : ಕಾಂಗ್ರೆಸ್ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೃದಯಾಘಾತದಿಂದ ನಿಧನರಾಗಿ ಒಂದು ತಿಂಗಳು
ಮಾಸುವ ಮುನ್ನವೇ ಅವರ ಮಡದಿಯೂ ಇಹಲೋಕ ತೇಜಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಾರಾಯಣ ಪತ್ನಿ ವೀಣಾ ವಿಧಿವಶರಾಗಿದ್ದಾರೆ.
ವೀಣಾ ಧ್ರುವನಾರಾಯಣ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸದ್ಯ ತಾಯಿ ನಿಧನದಿಂದ ಪುತ್ರ ದರ್ಶನ್ ಧ್ರುವ ನಾರಯಾಣ್ ದಿಗ್ಧಾಂತರಾಗಿದ್ದಾರೆ. ಸದ್ಯ ಕಾಂಗ್ರೆಸ್ ನಾಯಕರು ಮೈಸೂರು ಕಡೆ ತೆರಳಿ ದರ್ಶನ್ ಗೆ ಸಮಾಧಾನ
ಹೇಳಲು ಮುಂದಾಗಿದ್ದಾರೆ.