ಕಾಂಜಾವಾಲಾ ಅಪಘಾತ: ಅಂಜಲಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಶಾರುಖ್ ಖಾನ್

ನವದೆಹಲಿ: ಕಾಂಜಾವಾಲಾ ಅಪಘಾತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಡಿಸೆಂಬರ್ 31ರ ರಾತ್ರಿ ಸುಲ್ತಾನಪುರಿಯಲ್ಲಿ ಸಂಭವಿಸಿದ ಭಯಾನಕ ರಸ್ತೆ ಅಪಘಾತದಲ್ಲಿ ಅಂಜಲಿ ಸಿಂಗ್ ಸಾವನ್ನಪ್ಪಿದರು. ಇದೀಗ ಅಂಜಲಿ ಕುಟುಂಬಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಸಹಾಯಹಸ್ತ ಚಾಚಿಸಿದ್ದಾರೆ. 

ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಅಂಜಲಿ ಸಿಂಗ್ ಅವರ ತಾಯಿಗೆ ಹಣವನ್ನು ದೇಣಿಗೆ ನೀಡಿದೆ. ವರದಿಗಳ ಪ್ರಕಾರ, ಅಂಜಲಿ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದರು. ತಾಯಿ ಮತ್ತು ಒಡಹುಟ್ಟಿದವರಿಗೆ ನೆರವಾಗಿದ್ದರು. ಶಾರುಖ್ ಖಾನ್ ರ ಪ್ರತಿಷ್ಠಾನವು ಅಂಜಲಿ ಸಿಂಗ್ ಅವರ ತಾಯಿಯ ಆರೋಗ್ಯಕ್ಕೆ ಸಹಾಯ ಮಾಡಲು ಮತ್ತು ಅಂಜಲಿಯ ಒಡಹುಟ್ಟಿದವರಿಗೆ ಆರ್ಥಿಕ ಸಹಾಯ ಮಾಡಿದೆ ಎಂದು ವರದಿಯಾಗಿದೆ. 

ಮೀರ್ ಫೌಂಡೇಶನ್ ಅಧಿಕೃತ ಹೇಳಿಕೆಯಲ್ಲಿ, ‘ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಬಹಿರಂಗಪಡಿಸದ ಮೊತ್ತವನ್ನು ದೇಣಿಗೆ ನೀಡಿದೆ. ದೆಹಲಿಯ ಕಂಜಾವಾಲಾದಲ್ಲಿ 20 ವರ್ಷದ ಅಂಜಲಿ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಳು. 

Latest Indian news

Popular Stories