ಕಾಪು ಪುರಸಭೆ ಚುನಾವಣೆ: ಅದ್ದೂರಿಯಾಗಿ ನಡೆಯುತ್ತಿದೆ ವಿವಿಧ ಪಕ್ಷಗಳ ಚುನಾವಣಾ ಪ್ರಚಾರ

ಕಾಪು: ಪುರಸಭೆ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷಗಳು ನಾನಾ ಕಸರತ್ತಿನಲ್ಲಿ ತೊಡಗಿಸಿಕೊಂಡಿವೆ.

ಪುರಸಭೆಯಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ,ಜೆಡಿಎಸ್,ಎಸ್.ಡಿ.ಪಿಐ ಮತ್ತು ವೆಲ್ಫೇರ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಅವರೊಂದಿಗೆ ಪಕ್ಷೇತರರ ಕಾವು ಜೋರಾಗಿದೆ.

ಈಗಾಗಲೇ ಬಿಜೆಪಿ, ಕಾಂಗ್ರೆಸ್’ನ ಘಟಾನುಘಟಿ ನಾಯಕರು ರಂಗ ಪ್ರವೇಶಿಸಿದ್ದು ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಜೆ.ಡಿ.ಎಸ್, ಎಸ್.ಡಿ.ಪಿ.ಐ ಪಕ್ಷಗಳು ತೀವ್ರ ಪೈಪೋಟಿ ನೀಡಲು ಸನ್ನದ್ಧವಾಗಿದ್ದರೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಎರಡು ವಾರ್ಡಿನಲ್ಲಿ ಇಬ್ಬರು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಿದೆ.

ಕಾಪು ಪುರಸಭೆಯು 23 ವಾರ್ಡ್ ಹೊಂದಿದ್ದು ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 30 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ.

ಒಟ್ಟು 70 ನಾಮ ಪತ್ರ ಸಲ್ಲಿಕೆಯಾಗಿದ್ದು ಕಾಂಗ್ರೆಸ್ 25, ಬಿಜೆಪಿ 23, ಜೆಡಿಎಸ್ 8, ಎಸ್.ಡಿ.ಪಿ‌ಐ 9 ,ವೆಲ್ಫೇರ್ ಪಾರ್ಟಿ 2 ಮತ್ತಯ ಪಕ್ಷೇತರ 3 ನಾಮಪತ್ರಗಳನ್ನು ಸಲ್ಲಿಸಿದೆ.

Latest Indian news

Popular Stories

error: Content is protected !!