ಕಾಪು ಪುರಸಭೆ ಚುನಾವಣೆ: ಮತದಾನ ಆರಂಭ

ಕಾಪು: ಪುರಸಭೆಯ 23 ವಾರ್ಡಿನ ಮತದಾನ 7 ಗಂಟೆಗೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್,ಎಸ್.ಡಿ.ಪಿ.ಐ, ವೆಲ್ಫೇರ್ ಪಾರ್ಟಿ ಸೇರಿ ಒಟ್ಟು 70 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು ಮತದಾರರು ಬೆಳಿಗ್ಗೆಯೇ‌ ಮತದಾನ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಮತ ಚಲಾವಣೆಗೆ ಹುಮ್ಮಸ್ಸು ತೋರಿದ್ದಾರೆ.

ಮತದಾನದ ನೂರು ಮೀಟರ್ ದೂರದಲ್ಲಿ ಪಕ್ಷಗಳು ಬೂತ್ ನಿರ್ಮಿಸಿದ್ದು ಮತ ಕೇಂದ್ರದ ಬಳಿ ಪೊಲೀಸರು ಭದ್ರತೆ ನೀಡಿದ್ದಾರೆ. ಡಿಸೆಂಬರ್ 30 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ವಾಗಲಿದೆ.

Latest Indian news

Popular Stories

error: Content is protected !!