ಕಾರ್ಕಳ : ಖಾಸಗಿ ಬಸ್ –ಪಿಕಪ್ ಮುಖಾಮುಖಿ ಢಿಕ್ಕಿ, ಪಿಕಪ್ ಚಾಲಕ ಸಾವು

ಕಾರ್ಕಳ : ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಢಿಕ್ಕಿ ಹೊಡೆದು ಪಿಕಪ್ ಚಾಲಕ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ಸೆ.12 ರ ರಾತ್ರಿ 9.15 ಕ್ಕೆ ನಡೆದಿದೆ.

ಪಿಕ್ ಅಪ್ ಚಾಲಕ ನೆಲ್ಲಿಕಟ್ಟೆ ನಿವಾಸಿ ಸಂತೋಷ್ ನಾಯಕ್ ಸಾವಿಗೀಡಾದವರು .

ಹೆಬ್ರಿಯಿಂದ ಬೆಂಗಳೂರಿಗೆ ಹೋಗುತಿದ್ದ ಬಸ್ , ಹಿರ್ಗಾನದಿಂದ ನೆಲ್ಲಿಕಟ್ಟೆ ಕಡೆಗೆ ಬರುತಿದ್ದ ಪಿಕ್ ಅಪ್ ಮುಖಮುಖಿ ಡಿಕ್ಕಿ ಹೊಡೆದಿದೆ.

ಬಸ್ ಚಾಲಕ ವೇಗವಾಗಿ ಚಾಲನೆಯೇ ಅವಘಡ ಕ್ಕೆ ಕಾರಣವೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories