ಕಾರ್ಕಳ: ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಮಾರಾಟ ಮಾಡುತ್ತಿದ್ದಾರೆ ;ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ರಾಜೀನಾಮೆ

ಕಾರ್ಕಳದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಡಿಕೆಶಿ ಅಧ್ಯಕ್ಷನಾದಮೇಲೆ ಆಡಿದ್ದೇ ಆಟವಾಗಿದೆ
ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಮಾರಾಟ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಮಾಡಿದವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ ಎಂದರು.

ಹಣಕ್ಕಾಗಿ ಪಕ್ಷ ಮತ್ತು ಟಿಕೆಟ್ ಮಾರಾಟವಾಗಿದೆ.
ಸೊರಕೆಯವರು ಕಾಂಗ್ರೆಸ್ ಅವನತಿಗೆ ಕಾರಣ.
ಪುತ್ತೂರಿಂದ ಬಂದು ಕಾಂಗ್ರೆಸ್ ನಿರ್ಣಾಮ ಮಾಡಿದ್ದಾರೆ.
ಉಡುಪಿಯಲ್ಲಿ ಕಾಂಗ್ರೆಸ್ ಗೆ ಒಂದೂ ಸೀಟು ಬರೂದಿಲ್ಲ
ಸೊರಕೆ, ರಾಜೇಂದ್ರಕುಮಾರ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಉದಯ್ ಶೆಟ್ಟಿ 2018 ರಲ್ಲಿ ಬಿಜೆಪಿಗೆ ಓಟ್ ಹಾಕಿಸಿದ್ದಾರೆ. ಸಚಿವ ಸುನೀಲ್ ವಿರುದ್ಧ ಒಂದು ಹೇಳಿಕೆ ಕೊಟ್ಟಿಲ್ಲ. ಉದಯ್ ಶೆಟ್ಟಿ ಕಟೀಲ್, ಕಲ್ಲಡ್ಕ, ಸುನೀಲ್ ಜೊತೆ ಹೋಗುವ ವ್ಯಕ್ತಿ. ಕಾರ್ಕಳದಲ್ಲಿ ಕಾಂಟ್ರ್ಯಾಕ್ಟರ್ ಗಳ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ ಎಂದರು.

ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ನಿರ್ಣಾಮ ಮಾಡುತ್ತಾರೆ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಕಾರ್ಕಳ ಕಾಂಗ್ರೆಸ್ ಟಿಕೆಟ್ ಡೀಲ್ ಆಗಿದೆ.
ಸ್ಕ್ರೀನಿಂಗ್ ಕಮಿಟಿಯ ಸದಸ್ಯರಿಗೆ ಎರಡೆರಡು ಕೋಟಿ ರುಪಾಯಿ ಕೊಟ್ಟು ಟಿಕೆಟ್ ತಂದಿದ್ದಾರೆ. ಕಾರ್ಕಳದಲ್ಲಿ ಈ ಬಾರಿ ಜಾತಿ ಸಮೀಕರಣ ಇಲ್ಲ ಎಂದರು.

ಕಾಂಗ್ರೆಸ್ ಡಿಕೆಶಿಯ ಅಪ್ಪನ ಮನೆ ಆಸ್ತಿಯಾ?. ನನ್ನನ್ನು ಸಿದ್ಧಾಂತದಿಂದ ಉಚ್ಛಾಟನೆ ಮಾಡಲು ಆಗಲ್ಲ. ಮುನಿಯಾಲು ಕೂಡಾ ಭ್ರಷ್ಟ.ಸುನೀಲ್ ಕುಮಾರ್ ಕೂಡಾ ಭ್ರಷ್ಟ .ಕಾರ್ಕಳದಲ್ಲಿ ಭ್ರಷ್ಟರ ನಡುವೆ ಚುನಾವಣೆ ಆಗುತ್ತದೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕ ಮಂಜುನಾಥ ಪೂಜಾರಿ ಹೇಳಿಕೆ ನೀಡಿದ್ದಾರೆ.

Latest Indian news

Popular Stories