ಕಾರ್ಕಳ: ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದ ಪ್ರಾಂಶುಪಾಲ: ಪ್ರಕರಣ ದಾಖಲು

ಕಾರ್ಕಳ: ಶಾಲಾ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದ ಪ್ರಾಂಶುಪಾಲರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳಾದ ಆ್ಯಂಟೋನಿ ಜೀವನ್ ಹಾಗೂ ಮರಿಯನ್ ಕೆವಿನ್ ಈದು ಗ್ರಾಮದ ಬೊಲ್ಯೊಟ್ಟು ಗುರುಕುಲ ಸೆಂಟ್ರಲ್ ಸ್ಕೂಲ್ನ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ ಮೈಸೂರು ಮೂಲದ ವೆರೋನಿಕಾ ಎಂಬವರ ಮಗ, 7ನೇ ತರಗತಿಯ ವಿದ್ಯಾರ್ಥಿ ಮರಿಯನ್ ಕೆವಿನ್(13) ಎಂಬಾತ ಸೆ.2ರಂದು ಹಾಸ್ಟೆಲ್ನ ಕೊಠಡಿಯಲ್ಲಿ ಬೆಡ್ ಮೇಲೆ ಗಲಾಟೆ ಮಾಡಿದ ಕಾರಣಕ್ಕಾಗಿ ಶಾಲಾ ಪ್ರಾಂಶುಪಾಲ ರೋಹಿತ್, ಆತನ ಎಡತೊಡೆಗೆ ಬೆತ್ತದಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ

Latest Indian news

Popular Stories