ಕಾಶ್ಮೀರ: ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ಬಿರುಕು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಹೆದ್ದಾರಿಯೊಂದರ ವಿಸ್ತರಣೆ ಕಾಮಗಾರಿಯ ನಂತರ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಐದು ಕುಟುಂಬಗಳನ್ನು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಬಸ್ತಿ ಪ್ರದೇಶದಲ್ಲಿ ಗುಡ್ಡ ಕುಸಿಯಲು ಆರಂಭಿಸಿದ ನಂತರ ಹೆದ್ದಾರಿ ನಿರ್ಮಾಣ ಕಂಪನಿ ಕಟಿಂಗ್ ಚಟುವಟಿಕೆ ನಡೆಸಿದ ಪರಿಣಾಮ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ನಿವಾಸಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಠಾಣಾಧಿಕಾರಿ(ಎಸ್‌ಎಚ್‌ಒ) ಮತ್ತು ತಹಸೀಲ್ದಾರ್, ಐದು ಕುಟುಂಬಗಳನ್ನು ಶಾಲೆಗೆ ಸ್ಥಳಾಂತರಿಸಿದ್ದಾರೆ.

ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಈ ಪ್ರದೇಶದ 20 ರಿಂದ 25 ಮನೆಗಳು ಅಸುರಕ್ಷಿತವಾಗಿವೆ ಎಂದು ಆರೋಪಿಸಿದ ನಿವಾಸಿಗಳು, ನಿರ್ಮಾಣ ಕಂಪನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Latest Indian news

Popular Stories