ಕಾಸರಗೋಡು: ಮೀನು ಮಾರುಕಟ್ಟೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್ ವಶಕ್ಕೆ ಪಡೆದ ಅಧಿಕಾರಿಗಳು

0
798

ಕಾಸರಗೋಡು: ಕಾಸರಗೋಡು ಮೀನುಮಾರುಕಟ್ಟೆಯಲ್ಲಿ ಕೇರಳ ಆಹಾರ ಸುರಕ್ಷತಾ ಇಲಾಖೆಯು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್ ವಶಪಡಿಸಿಕೊಂಡಿದೆ. ಕನ್ಯಾಕುಮಾರಿ ಜಿಲ್ಲೆಯಿಂದ ಆಗಮಿಸಿದ ಟ್ರಕ್‌ನಿಂದ ಇದನ್ನು ವಶಕ್ಕೆ ಪಡೆಯಲಾಯಿತು ಎಂದು ಆಹಾರ ಸುರಕ್ಷತಾ ಸಹಾಯಕ ಆಯುಕ್ತ ಜಾನ್ ವಿಜಯಕುಮಾರ್ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಸಹಾಯಕ ಆಯುಕ್ತರು, ಮೀನುಗಾರಿಕೆ ಇಲಾಖೆಯ ವಿಸ್ತರಣಾಧಿಕಾರಿ ಮತ್ತು ಕಾಸರಗೋಡು ಪುರಸಭೆಯ ಆರೋಗ್ಯಾಧಿಕಾರಿ ಅವರನ್ನೊಳಗೊಂಡ ಸ್ಕ್ವಾಡ್ ಶನಿವಾರ ಮುಂಜಾನೆ 3.30 ಕ್ಕೆ ಮಾರುಕಟ್ಟೆಗೆ ಬರುವ ಏಳು ಶೀತಲೀಕೃತ ಟ್ರಕ್‌ಗಳನ್ನು ಪರಿಶೀಲಿಸಲು ಪ್ರಾರಂಭಿಸಿತು. ಒಂದು ಟ್ರಕ್‌ನ ಪೆಟ್ಟಿಗೆಯಲ್ಲಿ ಕೊಳೆತ ಮೀನುಗಳು ಕಂಡುಬಂದಿವೆ, ಎಲ್ಲಾ 50 ಬಾಕ್ಸ್‌ಗಳನ್ನು ಪರಿಶೀಲಿಸಿದ್ದೇವೆ” ಒಟ್ಟು ಏಳು ಟ್ರಕ್‌ಗಳನ್ನು ಪರಿಶೀಲಿಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೀನುಗಾರಿಕೆ ವಿಸ್ತರಣಾ ಅಧಿಕಾರಿಗಗಳು ಸುಮಾರು 25 ಕೆಜಿ ತೂಕದ ಎಂಟು ಬಾಕ್ಸ್ ಸಾರ್ಡೀನ್ ಗಳನ್ನ ವಶಪಡಿಸಿಕೊಂಡಿದ್ದು ಇದು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಬಾಕ್ಸ್ ಗಳನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ ಎಂದು ವಿಜಯಕುಮಾರ್ ತಿಳಿಸಿದರು.

ಮೀನು ಏಜೆಂಟರು ಮತ್ತು ಮಾರಾಟಗಾರರು ಅಧಿಕಾರಿಗಳನ್ನು ತಡೆಯಲು ಪ್ರಯತ್ನಿಸಿದರು ಇದರಿಂದ ಕೆಲಕಾಲ ಉದ್ವಿಗ್ನತೆ ಉಂಟಾಯಿತು, ಹಾಗಾಗಿ ಪೊಲೀಸರನ್ನು ಕರೆಸಬೇಕಾಯಿತು ಎಂದು ತಿಳಿಸಿದರು

ಮೇ 1 ರಂದು ಚೆರುವತ್ತೂರಿನ ಉಪಾಹಾರ ಗೃಹದಿಂದ ಷಾವರ್ಮಾ ತಿಂದು ಶಾಲಾ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟು 52 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮೇ 2 ರಂದು ಆಹಾರ ಸುರಕ್ಷತಾ ಇಲಾಖೆ ಜಿಲ್ಲೆಯಾದ್ಯಂತ ದಾಳಿ ನಡೆಸಿತ್ತು.ಮೇ 2 ರಂದು ಆರಂಭವಾದ ದಾಳಿಯಲ್ಲಿ ಇಲಾಖೆಯು ರಾಜ್ಯಾದ್ಯಂತ 110 ಆಹಾರದ ಮಳಿಗೆ ಮುಚ್ಚುವ ಸೂಚನೆಗಳನ್ನು ನೀಡಿದೆ.

LEAVE A REPLY

Please enter your comment!
Please enter your name here